ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಗ್ರಾಮಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಕೆಲಸ ನಿರ್ವಹಿಸುತ್ತಿರುವ ನೀರು ಗಂಟಿಗಳಿಗೆ ಈಗ ನೀಡುತ್ತಿರುವ ವೇತನವನ್ನು ೨೦ ಸಾವಿರ ರೂಗಳಿಗೆ ಹೆಚ್ಚಿಸಿ ಸರ್ಕಾರಿ ನೌಕರರಂತೆ ಜೀವನ ಭದ್ರತೆ ನೀಡುವಂತೆ ಕುಪ್ಪೆ ಗ್ರಾ.ಪಂ ಅಧ್ಯಕ್ಷೆ ಸವಿತಾ ಶ್ರೀನಿವಾಸ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಕುಪ್ಪೆ ಗ್ರಾಮ ಪಂಚಾಯಿತಿಯಲ್ಲಿ ನಡೆದ ಚಿಕ್ಕಕೊಪ್ಪಲು ಗ್ರಾಮದಲ್ಲಿ ನೀರು ಗಂಟಿಯಾಗಿ ೩೦ ವರ್ಷದಿಂದ ಕೆಲಸ ನಿರ್ವಹಿಸಿ ಸೇವೆಯಿಂದ ನಿವೃತ್ತಿಯಾದ ಸಿ.ಕೆ.ರಾಮೇಗೌಡ ಅವರಿಗೆ ಏರ್ಪಡಿಸಿದ್ದ ಸನ್ಮಾನ ಮತ್ತು ಬಿಳ್ಗೊಂಡಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುಡಿಯುವ ನೀರು : ಬೀದಿ ದೀಪದ ನಿರ್ವಹಣೆ ಮತ್ತು ಕಂದಾಯ ವಸೂಲಿಗೆ ಸಹಕಾರ ಸೇರಿದಂತೆ ಗ್ರಾಮಗಳ ಮೂಲಭೂತ ಸೌಕರ್ಯದ ಜತಗೆ ಅಭಿವೃದ್ದಿಯಲ್ಲಿ ನೀರು ಗಂಟಿಗಳ ಸೇವೆ ಅಪಾರವಾಗಿದ್ದು ಇವರ ಸೇವೆಯನ್ನು ಸರ್ಕಾರ ಪರಿಗಣಿಸಿ ವೇತನ ಹೆಚ್ಚಿಸ ಬೇಕೆಂದರು. ಗ್ರಾಮಗಳಲ್ಲಿ ಗ್ರಾ.ಪಂ.ಮೂಲಕ ಕೈಗೊಳ್ಳಬೇಕಾದ ಕೆಲಸ ಕಾರ್ಯಗಳ ಜನತೆಯ ಆರೋಗ್ಯ ಕಾಪಾಡಲು ಶುದ್ದ ಕುಡಿಯುವ ನೀರು ಸರಬರಾಜು ಮಾಡುವ ಮೂಲಕ ನೀರುಗಂಟಿಗಳು ತಮ್ಮದೇ ಆದ ಸೇವೆಯನ್ನು ಜನರಿಗೆ ನೀಡುತ್ತಿದ್ದು ಈ ನಿಟ್ಟಿನಲ್ಲಿ ರಾಮೇಗೌಡರು ಕಳೆದ ೩೦ವರ್ಷಗಳಿಂದ ತಮ್ಮ ಗ್ರಾಮದಲ್ಲಿ ನೀರುಗಂಟಿಯಾಗಿ ಯಾವುದೇ ಕಪ್ಪು ಚುಕ್ಕೆ ಬಾರದಂತೆ ಕೆಲಸ ನಿರ್ವಹಿಸಿ ನಿವೃತ್ತಿ ಆಗುತ್ತಿದ್ದು ಇವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದರು ಹಾರೈಸಿದರು.

ಈ ಸಂದರ್ಭದಲ್ಲಿ ಕುಪ್ಪೆ ಉಪಾಧ್ಯಕ್ಷ ಗೀತಾ ಕಾಂತರಾಜ್, ಸದಸ್ಯರಾದ ಸಿ.ಬಿ.ಧರ್ಮ, ಗಣೇಶ ರೇಖಾಉಮೇಶ್,ಮುಖಂಡರಾದ ಮಹೇಂದ್ರ, ಮಹೇಶ್ , ಗ್ರಾ.ಪಂ.ಪಿಡಿಒ ಯೋಗಾನಂದ ಕಾರ್ಯದರ್ಶಿ ಸಿದ್ದರಾಜು, ಬಿಲ್ ಕಲೆಕ್ಟರ್ ನಾಗರಾಜು, ಡಿಒ.ಡಿ.ಬಿ. ಮಾಹದೇವಪ್ಪ, ನೀರಗುಂಟೆಗಳಾದ ಪ್ರಕಾಶ್, ಮೋಹನ್, ಜೈಕುಮಾರ್, ಚೆಲುವರಾಜ್ ಸೇರಿದಂತೆ ಮತ್ತಿತರರು ಇದ್ದರು.