Tuesday, July 8, 2025
Google search engine

Homeಅಪರಾಧಅಮೆರಿಕದಲ್ಲಿ ಟ್ರಕ್- ಕಾರು ನಡುವೆ ಅಪಘಾತ: ಭಾರತ ಮೂಲದ ನಾಲ್ವರು ಸಜೀವ ದಹನ

ಅಮೆರಿಕದಲ್ಲಿ ಟ್ರಕ್- ಕಾರು ನಡುವೆ ಅಪಘಾತ: ಭಾರತ ಮೂಲದ ನಾಲ್ವರು ಸಜೀವ ದಹನ

ವಾಷಿಂಗ್ಟನ್: ಕಾರು ಹಾಗೂ ಟ್ರಕ್ ನಡುವಿನ ಅಪಘಾತದಲ್ಲಿ ಭಾರತ ಮೂಲದ ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿರುವ ಘಟನೆ ಸೋಮವಾರ ನಡೆದಿದೆ.

ಗ್ರೀನ್ ಕೌಂಟಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಭಾರತದ ಹೈದರಾಬಾದ್ ಮೂಲದ ತೇಜಸ್ವಿನಿ, ವೆಂಕಟ್ ಮತ್ತು ಅವರ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕದ ಡಲ್ಲಾಸ್‌ನಲ್ಲಿ ವಾಸವಿದ್ದ ಕುಟುಂಬವು ರಜೆಯ ನಿಮಿತ್ತ ಕಳೆದ ವಾರ ಅಟ್ಲಾಂಟಾದಲ್ಲಿದ್ದ ಸಂಬಂಧಿಕರ ಮನೆಗೆ ತೆರಳಿತ್ತು. ಸೋಮವಾರ ಅಟ್ಲಾಂಟಾದಿಂದ ಡಲ್ಲಾಸ್‌ಗೆ ಹಿಂತಿರುತ್ತಿದ್ದ ವೇಳೆ ಟ್ರಕ್, ಕಾರಿಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಕಾರಿಗೆ ಬೆಂಕಿ ಹತ್ತಿಕೊಂಡಿದ್ದು, ಕಾರಿನಲ್ಲಿದ್ದ ನಾಲ್ವರು ಸಜೀವ ದಹನವಾಗಿದ್ದಾರೆ.

ಮೃತರ ಗುರುತುಗಳನ್ನು ಡಿಎನ್‌ಎ ಪರೀಕ್ಷೆಯ ಮೂಲಕ ಪತ್ತೆ ಮಾಡಿದ ಬಳಿಕ ಮೃತರ ಕುಟುಂಬಕ್ಕೆ ಹಸ್ತಾಂತರ ಮಾಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular