Sunday, April 20, 2025
Google search engine

HomeUncategorizedರಾಷ್ಟ್ರೀಯಚಹಾದಂಗಡಿ, ಇತರೆ ವಾಹನಗಳಿಗೆ ಢಿಕ್ಕಿ ಹೊಡೆದ ಟ್ರಕ್: ಐವರ ಸಾವು

ಚಹಾದಂಗಡಿ, ಇತರೆ ವಾಹನಗಳಿಗೆ ಢಿಕ್ಕಿ ಹೊಡೆದ ಟ್ರಕ್: ಐವರ ಸಾವು

ಚೆನ್ನೈ: ಟ್ರಕ್‌ ವೊಂದು ಚಹಾದಂಗಡಿ ಹಾಗೂ ಇತರೆ ವಾಹನಗಳಿಗೆ ಢಿಕ್ಕಿ ಹೊಡೆದ ಪರಿಣಾಮ ಕನಿಷ್ಠ 5 ಮಂದಿ ಮೃತಪಟ್ಟು, 19 ಮಂದಿ ಗಾಯಗೊಂಡಿರುವ ಘಟನೆ ಶನಿವಾರ(ಡಿ.30 ರಂದು) ಮುಂಜಾನೆ ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯಲ್ಲಿ ನಡೆದಿದೆ.

ಮೃತರನ್ನು ಮಧುರವಾಯಲ್‌ನ ಸುರೇಶ್ (39),  ಗೋಕುಲಕೃಷ್ಣನ್ (25) ತಿರುವಳ್ಳೂರಿನ ಸತೀಶ್(25), ಅಮಿಂಜಿಕರೈ; ಉತ್ತುಕೊಟ್ಟೈ ಮೂಲದ ಜೆಗನಾಥನ್ (60) ಶಾಂತಿ(55) ಎಂದು ಗುರುತಿಸಲಾಗಿದೆ.

ಟ್ರಕ್‌ ಸಿಮೆಂಟ್‌ ಚೀಲಗಳನ್ನು ಹೊತ್ತುಕೊಂಡು ಅರಿಯಲೂರಿನಿಂದ ಶಿವಗಂಗೈಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ . ಅಪಘಾತದ ವೇಳೆ ಚಾಲಕ ನಿದ್ದೆಯ ಮಂಪರಿನಲ್ಲಿದ್ದ ಕಾರಣ ಟ್ರಕ್ ನಿಯಂತ್ರಣ ತಪ್ಪಿ ಚಹಾದಂಗಡಿ ಹಾಗೂ ಪಕ್ಕದಲ್ಲಿದ್ದ ವಾಹನಗಳಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಕನಿಷ್ಠ ಐವರು ಮೃತಪಟ್ಟಿದ್ದಾರೆ. 19 ಮಂದಿ ಗಾಯಗೊಂಡಿದ್ದಾರೆ.

ಅಪಘಾತದ ಸಂದರ್ಭದಲ್ಲಿ ಅಂಗಡಿಯಲ್ಲಿ ಹಲವಾರು ಶಬರಿಮಲೆ ಯಾತ್ರಾರ್ಥಿಗಳು ಟೀ ಸೇವಿಸುತ್ತಿದ್ದರು. ಅಂಗಡಿ ಬಳಿ ನಿಲ್ಲಿಸಿದ್ದ ಕಾರು ಹಾಗೂ ಇತರೆ ದ್ವಿಚಕ್ರ ವಾಹನಗಳಿಗೂ ಅಪಘಾತದಿಂದ ಹಾನಿಯಾಗಿದೆ.

RELATED ARTICLES
- Advertisment -
Google search engine

Most Popular