Thursday, April 3, 2025
Google search engine

Homeವಿದೇಶಟಿಕ್ ಟಾಕ್ ಮೇಲಿನ ನಿಷೇಧ ಹಿಂಪಡೆದ ಟ್ರಂಪ್: ಆ್ಯಪ್ ಕಾರ್ಯಾಚರಣೆ ಪುನಾರಂಭ

ಟಿಕ್ ಟಾಕ್ ಮೇಲಿನ ನಿಷೇಧ ಹಿಂಪಡೆದ ಟ್ರಂಪ್: ಆ್ಯಪ್ ಕಾರ್ಯಾಚರಣೆ ಪುನಾರಂಭ

ಹೂಸ್ಟನ್: ಕಿರು ವಿಡಿಯೊ ಆ್ಯಪ್ ಟಿಕ್ ಟಾಕ್ ಮೇಲೆ ಹೇರಲಾಗಿದ್ದ ನಿಷೇಧವನ್ನು ಹಿಂಪಡೆಯುವುದಾಗಿ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದು, ಆಮೆರಿಕದಲ್ಲಿ ಟಿಕ್ ಟಾಕ್ ಕಾರ್ಯಾಚರಣೆ ಪುನಾರಂಭಗೊಂಡಿದೆ.

ಇಲ್ಲಿ ನಡೆದ ಸಮಾವೇಶವೊಂದರಲ್ಲಿ ಭಾಗವಹಿಸಿ ಮಾತನಾಡಿದ ಟ್ರಂಪ್, ಅಧಿಕಾರ ವಹಿಸಿಕೊಂಡ ನಂತರ ಈ ಕುರಿತು ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಪ್ರಕಟಿಸಿದ್ದಾರೆ. ಅಮೆರಿಕದಲ್ಲಿ ಸುಮಾರು 170 ದಶಲಕ್ಷ ಮಂದಿ ಟಿಕ್ ಟಾಕ್ ಬಳಕೆದಾರರಿದ್ದಾರೆ.

“ಟಿಕ್ ಟಾಕ್ ಮತ್ತೆ ಬಂದಿದೆ. ನಿಮಗೆ ತಿಳಿದಿರಬಹುದು, ನಾನೂ ಟಿಕ್ ಟಾಕ್ ನಲ್ಲಿ ಕೆಲವು ವಿಡಿಯೊಗಳನ್ನು ಮಾಡಿದ್ದೇನೆ. ಟಿಕ್ ಟಾಕ್ ನಮಗೆ ಮತಗಳನ್ನು ತಂದುಕೊಟ್ಟಿದೆ. ನನಗೆ ಟಿಕ್ ಟಾಕ್ ಇಷ್ಟ” ಎಂದು ಟ್ರಂಪ್ ಹೇಳಿದ್ದಾರೆ.

“ನಾವು ಹಲವು ಮಂದಿಯ ಉದ್ಯೋಗ ಉಳಿಸಬೇಕಿದೆ. ನಮ್ಮ ಉದ್ಯಮವನ್ನು ಚೀನಾಗೆ ಬಿಟ್ಟುಕೊಡಲು ನಾವು ಸಿದ್ಧರಿಲ್ಲ. ನಮ್ಮ ಉದ್ಯಮವನ್ನು ಬೇರೆಯವರಿಗೆ ಬಿಟ್ಟುಕೊಡಲು ನಾವು ಬಯಸುವುದಿಲ್ಲ” ಎಂದೂ ಟ್ರಂಪ್ ನುಡಿದಿದ್ದಾರೆ.

“ಜಂಟಿ ಉದ್ಯಮವೇ ಟಿಕ್ ಟಾಕ್ ಸಮಸ್ಯೆಗೆ ಪರಿಹಾರ. ಶೇ. 50ರಷ್ಟು ಅಮೆರಿಕದ ಪಾಲು ಇರಬೇಕು ಎಂದು ನಾನು ಸೂಚಿಸಿದೆ. ಅದಕ್ಕೆ ಅವರು ಒಪ್ಪಿಕೊಂಡರು. ಹೀಗಾಗಿ ನಾನು ನಿಷೇಧ ಹಿಂಪಡೆವ ಭರವಸೆ ನೀಡಿದೆ” ಎಂದು ಅವರು ಹೇಳಿದ್ದಾರೆ.

“ನಾವು ಯಾವುದೇ ಬಂಡವಾಳ ಹೂಡುತ್ತಿಲ್ಲ. ನಾವು ಕೆಲವೊಂದು ಒಪ್ಪಿಗೆಗಳನ್ನು ಎದುರು ನೋಡುತ್ತಿದ್ದೇವೆ. ಅದು ಇಲ್ಲದೆ ಇದ್ದರೆ ಅವರು ಏನೂ ಮಾಡಲು ಆಗುವುದಿಲ್ಲ” ಎಂದು ಅವರು ತಿಳಿಸಿದ್ದಾರೆ.

ಟ್ರಂಪ್ ನಿರ್ಧಾರಕ್ಕೆ ಟಿಕ್ ಟಾಕ್ ಧನ್ಯವಾದ ಸಲ್ಲಿಸಿದೆ. ಆ್ಯಪ್ ಸೇವೆಗಳನ್ನು ಪುನಾರಂಭಿಸಲು ಸ್ಪಷ್ಟತೆ ಹಾಗೂ ಭರವಸೆ ನೀಡಿದ್ದಕ್ಕೆ ಕೃತಜ್ಞತೆ ಹೇಳಿದೆ.

ಚೀನಾ ಮೂಲದ ಬೈಟೆ ಡ್ಯಾನ್ಸ್ ಮಾಲಕತ್ವದ ಟಿಕ್ ಟಾಕ್ ಅನ್ನು ಜನವರಿ 19ರಿಂದ ಅನ್ವಯವಾಗುವಂತೆ ನಿಷೇಧಿಸುವ ನಿರ್ಧಾರಕ್ಕೆ ಕಳೆದ ವರ್ಷದ ಎಪ್ರಿಲ್ ತಿಂಗಳಲ್ಲಿ ಅಧ್ಯಕ್ಷ ಜೋ ಬೈಡನ್ ಸಹಿ ಹಾಕಿದ್ದರು. ರಾಷ್ಟ್ರೀಯ ಭದ್ರತೆಗೆ ಧಕ್ಕೆ ತಂದ ಆರೋಪದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು.

RELATED ARTICLES
- Advertisment -
Google search engine

Most Popular