Thursday, April 3, 2025
Google search engine

Homeಅಡುಗೆಒಮ್ಮೆ ಬೀಟ್‍ರೂಟ್ ಹಲ್ವಾ ಟ್ರೈ ಮಾಡಿ !

ಒಮ್ಮೆ ಬೀಟ್‍ರೂಟ್ ಹಲ್ವಾ ಟ್ರೈ ಮಾಡಿ !

ಬೀಟ್‍ರೂಟ್ ಹಲ್ವಾ ಮಾಡಲು ಬೇಕಾದ ಪದಾರ್ಥಗಳು:
*ಬೀಟ್‍ರೂಟ್ – 4
*ಹಾಲು – 2 ಕಪ್
*ಸಕ್ಕರೆ – 1/2 ಕಪ್ ಅಥವಾ ರುಚಿಗೆ ತಕ್ಕಷ್ಟು
*ಏಲಕ್ಕಿ ಪುಡಿ – 1 ಟೀ ಚಮಚ
*ತುಪ್ಪ – 3 ಟೇಬಲ್ ಚಮಚ
*ಗೋಡಂಬಿ – ಸ್ವಲ್ಪ
*ಒಣ ದ್ರಾಕ್ಷಿ – ಸ್ವಲ್ಪ
*ಬಾದಾಮಿ – ಒಂದು ಹಿಡಿ
*ಕೋವಾ – 100 ಗ್ರಾಂ (ಐಚ್ಛಿಕ)
*ಮಂದಗೊಳಿಸಿದ ಹಾಲು – ನಿಮ್ಮ ರುಚಿಗೆ ತಕ್ಕಷ್ಟು (ಐಚ್ಛಿಕ)

ತಯಾರಿಸುವ ವಿಧಾನ :
1. ಬೀಟ್‍ರೂಟನ್ನು ಚೆನ್ನಾಗಿ ತೊಳೆದು, ಹ್ಯಾಂಡ್ ಗ್ರೇಟರಿನಿಂದ ಸಿಪ್ಪೆಯನ್ನು ಸುಲಿಯಿರಿ.
2. ತುಪ್ಪವನ್ನು ಆಳವಾದ ತಳವಿರುವ ಬಾಣಲೆಯಲ್ಲಿ ಹಾಕಿಕೊಂಡು ಕಾಯಿಸಿ.
3. ಗೋಡಂಬಿ, ಬಾದಾಮಿ ಬೀಜಗಳನ್ನು ತುಪ್ಪದಲ್ಲಿ ಹಾಕಿ, ಕಡಿಮೆ ಉರಿಯಲ್ಲಿ ಸ್ವಲ್ಪ ಹೊತ್ತು ಹುರಿಯಿರಿ. ಇದರಿಂದ ಅವುಗಳು ಗರಿಗರಿಯಾಗುತ್ತವೆ.
4. ನಂತರ ಅವುಗಳನ್ನು ಬಾಣಲೆಯಿಂದ ತೆಗೆದು ಪಕ್ಕದಲ್ಲಿಡಿ.
5. ಸಿಪ್ಪೆ ತೆಗೆದ ಬೀಟ್‍ರೂಟ್‍ಗಳನ್ನು ಬೆಚ್ಚಗಿನ ತುಪ್ಪದಲ್ಲಿ ಹಾಕಿ ಮತ್ತು ಸ್ವಲ್ಪ ಹೊತ್ತು ಕಡಿಮೆ ಹುರಿಯಲ್ಲಿ ಹುರಿಯಿರಿ.
6. ಈಗ, ಇದಕ್ಕೆ ಹಾಲು ಮತ್ತು ಕೋವಾವನ್ನು ಹಾಕಿ. ಕಡಿಮೆ ಹುರಿಯಲ್ಲಿ ಹುರಿಯಿರಿ.
7. ನಂತರ, ಇದಕ್ಕೆ ಸಕ್ಕರೆ, ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಕಡಿಮೆ ಗಾತ್ರದ ಹುರಿಯಲ್ಲಿ ಬೇಯಿಸಿ ಮತ್ತು ಆಗಾಗ ಚೆನ್ನಾಗಿ ಕಲೆಸಿ ಕೊಡಿ.
8. ಇದರ ರುಚಿ ಮತ್ತಷ್ಟು ಹೆಚ್ಚಾಗಲು ಮಂದಗೊಳಿಸಿದ ಹಾಲನ್ನು ಬೆರೆಸಿ.
9. ಹಾಲು ಮತ್ತಷ್ಟು ಮಂದಗೊಳ್ಳುವವರೆಗೆ ಹಾಗು ಮಿಶ್ರಣವು ಗಟ್ಟಿಯಾಗುವವರೆಗೆ ಬೇಯಿಸುತ್ತ ಇರಿ.
10. ಹುರಿಯನ್ನು ಆರಿಸಿ ಮತ್ತು ಗೋಡಂಬಿ, ಬಾದಾಮಿ ಮತ್ತು ಒಣ ದ್ರಾಕ್ಷಿಗಳಿಂದ ಹಲ್ವಾವನ್ನು ಅಲಂಕರಿಸಿ.
11. ಈಗ ಬೀಟ್‍ರೂಟ್ ಹಲ್ವಾ ಬಡಿಸಲು ಸಿದ್ಧವಾಗಿದೆ. ಆರೋಗ್ಯಕರವಾದ ಹಲ್ವಾವನ್ನು ನಿಮ್ಮ ಅತಿಥಿಗಳಿಗೆ ಬಡಿಸಿ

RELATED ARTICLES
- Advertisment -
Google search engine

Most Popular