ಮಶ್ರೂಮ್ ಗ್ರೇವಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:
ಮಶ್ರೂಮ್ –ಎರಡು ಪ್ಯಾಕೆಟ್ ,ಬಟಾಣಿ- ಒಂದು ಬಟ್ಟಲು,ಈರುಳ್ಳಿ –2,ಟೊಮೆಟೊ– 4,ದನಿಯಾ ಪುಡಿ– ಎರಡು ಚಮಚ,ಗರಂ ಮಸಾಲ –ಒಂದು ಚಮಚ,ಅರಿಸಿನ ಪುಡಿ– ಒಂದು ಚಮಚ,ಶುಂಠಿ -ಬೆಳ್ಳುಳ್ಳಿ ಪೇಸ್ಟ್- 1 ಚಮಚ,ಕಸ್ತೂರಿ ಮೇಥಿ–ಒಂದು ಚಮಚ,ಸೋಂಪು ಕಾಳು –ಒಂದು ಚಮಚ,ಚಕ್ಕೆ –2,ಲವಂಗ –2,ಸ್ಟಾರ್ ಮಸಾಲ ಹೂ– 2,ಅನಾನಸ್ ಮೊಗ್ಗು-2,ಏಲಕ್ಕಿ –2,ಎಣ್ಣೆ- ನಾಲ್ಕು ಟೇಬಲ್ ಚಮಚ,ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಪಾತ್ರೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿಕೊಳ್ಳಬೇಕು. ಕಸ್ತೂರಿ ಮೇಥಿ, ಸೋಂಪು, ಚಕ್ಕೆ -ಲವಂಗ, ಸ್ಟಾರ್ ಮಸಾಲ ಹೂ, ಅನಾನಸ್ ಮೊಗ್ಗು, ಏಲಕ್ಕಿ ಸೇರಿಸಿ ಮಿಶ್ರಣ ಮಾಡಬೇಕು.
ಬಳಿಕ ಹೆಚ್ಚಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ಬಳಿಕ ಟೊಮೆಟೊ, ಶುಂಠಿ -ಬೆಳ್ಳುಳ್ಳಿ ಪೇಸ್ಟ್ ಹಾಗೂ ಸ್ವಲ್ಪ ಉಪ್ಪು ಹಾಕಿಕೊಂಡು ಬೆರೆಸಿಕೊಡಬೇಕು.
ನಂತರ ಮಸಾಲ ಪುಡಿಗಳು ಹಾಗೂ ಬಟಾಣಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ನೀರನ್ನು ಹಾಕಿ 5 ನಿಮಿಷಗಳ ಕಾಲ ಬಟಾಣಿ ಬೇಯಲು ಬಿಡಿ. ಇದೀಗ ಕತ್ತರಿಸಿದ ಮಶ್ರೂಮ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
10 ರಿಂದ 15 ನಿಮಿಷ ಬೇಯಲು ಬಿಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಉದುರಿಸಿ. ಇದೀಗ ರುಚಿಕರವಾದ ಮಶ್ರೂಮ್ ಗ್ರೇವಿ ಸವಿಯಲು ಸಿದ್ಧವಾಗುತ್ತದೆ.