Friday, April 4, 2025
Google search engine

Homeಅಡುಗೆರುಚಿಯ ಜೊತೆಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಕಾಳುಮೆಣಸಿನ ಸಾರು ಮಾಡಿ...

ರುಚಿಯ ಜೊತೆಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಕಾಳುಮೆಣಸಿನ ಸಾರು ಮಾಡಿ ನೋಡಿ

ಮಳೆಗಾಲ ಪ್ರಾರಂಭವಾಯಿತೆಂದರೆ ಸಾಕು, ಜೊತೆಗೆ ಶೀತ, ಕೆಮ್ಮು, ನೆಗಡಿ ಮುಂತಾದ ಸಾಕಷ್ಟು ಸೋಂಕುಗಳು ಬಂದು ಬಿಡುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಈ ಎಲ್ಲಾ ಸಮಸ್ಯೆಗಳಿಂದ ನಿಮ್ಮನ್ನು ಕಾಪಾಡಲು ಮನೆಯಲ್ಲಿಯೇ ರುಚಿಕರ ಕಾಳುಮೆಣಸಿನ ಸಾರು ತಯಾರಿಸಿ. ಕೇವಲ 5 ನಿಮಿಷಗಳಲ್ಲಿ ಕಡಿಮೆ ಪದಾರ್ಥಗಳೊಂದಿಗೆ ನೀವು ಈ ರುಚಿಕರ ಹಾಗೂ ಆರೋಗ್ಯಕರ ಕಾಳುಮೆಣಸಿನ ಸಾರನ್ನು ತಯಾರಿಸಬಹುದು. ಯಾವ ರೀತಿ ತಯಾರಿಸುವುದು ಎಂಬುದರ ಕುರಿತು ಇಲ್ಲಿ ಕೆಳಗೆ ಮಾಹಿತಿ ತಿಳಿಸಲಾಗಿದೆ. ಕೇವಲ 5 ನಿಮಿಷಗಳಲ್ಲಿ ಈ ಆರೋಗ್ಯಕರ ಸಾರು ತಯಾರಿಸಿ. ಬಿಸಿ ಬಿಸಿ ಅನ್ನದೊಂದಿಗೆ ಸವಿಯಿರಿ.

ಮೆಣಸಿನ ಸಾರು:ಬೇಕಾಗುವ ಪದಾರ್ಥಗಳು
ಕಾಳು ಮೆಣಸು
ಜೀರಿಗೆ
ಉಪ್ಪು
ಬೆಲ್ಲ
ಹುಳಿ
ಸಾಸಿವೆ
ಒಗ್ಗರಣೆ ಸೊಪ್ಪು(ಕರಿಬೇವು)

ಮೆಣಸಿನ ಸಾರು ಮಾಡುವ ವಿಧಾನ:
ಮೊದಲಿಗೆ ಕಾಳುಮೆಣಸು, ಜೀರಿಗೆಯನ್ನು ಬೇರೆ ಬೇರೆಯಾಗಿ ಹುರಿದುಕೊಳ್ಳಿ. ಇದಾದ ಬಳಿಕ ಇವೆರಡನ್ನು ಕುಟ್ಟಾನಿಯಲ್ಲಿ ಹಾಕಿ ಚೆನ್ನಾಗಿ ಪುಡಿ ಮಾಡಿ.
ನಂತರ ಒಂದು ಪಾತ್ರೆಯಲ್ಲಿ ಸಾರಿಗೆ ಬೇಕಾದಷ್ಟು ನೀರು ಹಾಕಿ, ನೀರನ್ನು ಕುದಿಯಲು ಬಿಡಿ. ನೀರು ಕುದಿ ಬರುತ್ತಿದ್ದಂತೆ ಅದಕ್ಕೆ ರುಚಿಗೆ ಬೇಕಾದಷ್ಟು ಉಪ್ಪು, ಹುಳಿ, ಬೆಲ್ಲ ಸೇರಿಸಿ. ನಂತರ ಈಗಾಗಲೇ ಪುಡಿ ಮಾಡಿ ಇಟ್ಟ ಕಾಳುಮೆಣಸು, ಜೀರಿಗೆಯ ಪುಡಿಯನ್ನು ಹಾಕಿ. ಇವೆಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ. 5 ನಿಮಿಷಗಳ ಕಾಲ ಚೆನ್ನಾಗಿ ಕುದಿಯಲು ಬಿಡಿ.
ಇದೀಗ ಕಾಳುಮೆಣಸಿನ ಸಾರು ರೆಡಿಯಾಗಿದೆ. ಕೊನೆಯಲ್ಲಿ ಇದಕ್ಕೆ ಸಾಸಿವೆ, ಒಣ ಮೆಣಸು ಹಾಗೂ ಕರಿಬೇವು ಎಲೆಗಳ ಒಗ್ಗರಣೆ ಹಾಕಿ.
ಮಳೆಗಾಲದಲ್ಲಿ ಬಿಸಿ ಬಿಸಿ ಅನ್ನದೊಂದಿಗೆ ಹೇಳಿ ಮಾಡಿಸಿದ ಜೋಡಿ. ರುಚಿಯ ಜೊತೆಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಈ ಕಾಳುಮೆಣಸಿನ ಸಾರನ್ನು ನೀವು ನಿಮ್ಮ ಮನೆಯಲ್ಲಿ ಪ್ರಯತ್ನಿಸಿ.

RELATED ARTICLES
- Advertisment -
Google search engine

Most Popular