Friday, April 4, 2025
Google search engine

HomeUncategorizedರಾಷ್ಟ್ರೀಯತಿರುಪತಿ ವೆಂಕಟೇಶ್ವರನ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಟಿಟಿಡಿ ಕಟ್ಟುನಿಟ್ಟಿನ ಸೂಚನೆ

ತಿರುಪತಿ ವೆಂಕಟೇಶ್ವರನ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಟಿಟಿಡಿ ಕಟ್ಟುನಿಟ್ಟಿನ ಸೂಚನೆ

ತಿರುಮಲ: ತಿರುಪತಿ ವೆಂಕಟೇಶ್ವರ ದರ್ಶನಕ್ಕೆ ನಿತ್ಯ ಜನ ಸಾಗರ ಹರಿದು ಬರುತ್ತದೆ. ದೇಶ ವಿದೇಶಗಳಿಂದ ಬರುವ ಈ ಭಕ್ತರ ನಿರ್ವಹಣೆ ಟಿಟಿಡಿಗೆ ಅತಿ ದೊಡ್ಡ ಸವಾಲು ಕೂಡ ಇದೇ ಕಾರಣಕ್ಕೆ ಕಾಲ ಕಾಲಕ್ಕೆ ಹಲವು ನಿಯಮಗಳನ್ನು ಮಾರ್ಪಡು ಮಾಡಿ ಈ ಕುರಿತು ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಸೂಚನೆ ನೀಡುತ್ತಿರುತ್ತದೆ. ಇದೀಗ ಅದೇ ರೀತಿಯಲ್ಲಿ ಕಟ್ಟುನಿಟ್ಟಿನ ಸೂಚನೆಯನ್ನು ಮತ್ತೊಮ್ಮೆ ಭಕ್ತರಿಗಾಗಿ ಹೊರಡಿಸಿದೆ.

ಟೋಕನ್​ ಅಥವಾ ಟಿಕೆಟ್​ ಪಡೆದವರಿಗೆ ನಿಗದಿಪಡಿಸಿದ ಸಮಯಕ್ಕೆ ದೇವರ ದರ್ಶನದ ಪ್ರವೇಶದ ದ್ವಾರಕ್ಕೆ ಆಗಮಿಸಿಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ. ಈ ಸಂಬಂಧ ಈಗಾಗಲೇ ಮಾಧ್ಯಮಗಳಲ್ಲೂ ಭಕ್ತರಿಗೆ ಮನವಿ ಮಾಡಲಾಗಿದೆ.

ನಿಗದಿತ ಸಮಯಕ್ಕೆ ಮೊದಲೇ ಬಂದರು, ದರ್ಶನದ ಸಾಲಿಗೆ ನುಗ್ಗುವುದು ಸರಿಯಲ್ಲ. ಇದರಿಂದ ಇತರರಿಗೆ ತೊಂದರೆಯಾಗುವ ಜೊತೆಗೆ ಈ ಸಂಬಂಧ ಕೆಲ ಭಕ್ತರು ವ್ಯವಸ್ಥೆ ನಿರ್ವಹಣೆ ಮತ್ತು ಜನದಟ್ಟಣೆ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪದೇ ಪದೇ ಈ ಕುರಿತು ನಾವು ಭಕ್ತರಿಗೆ ಮನವಿ ಮಾಡುತ್ತಿದ್ದೇವೆ. ಸಮಯ ಪಾಲನೆ ಮಾಡುವುದರಿಂದ ವ್ಯವಸ್ಥೆಗಳು ಸರಾಗವಾಗಿ ಸಾಗಲಿದೆ. ಭಕ್ತರು ಇದಕ್ಕೆ ಸಹಕಾರ ನೀಡಬೇಕು ಎಂದು ತನ್ನ ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದೆ.

RELATED ARTICLES
- Advertisment -
Google search engine

Most Popular