Monday, April 21, 2025
Google search engine

Homeಅಪರಾಧತುಮಕೂರು: ಅಕ್ರಮ ಸಂಬಂಧದಿಂದ ಗರ್ಭಿಣಿಯಾಗಿ ಹಸುಗೂಸನ್ನು ಬಯಲಿಗೆಸೆದ ಯುವತಿ- ಮಗು ಸಾವು

ತುಮಕೂರು: ಅಕ್ರಮ ಸಂಬಂಧದಿಂದ ಗರ್ಭಿಣಿಯಾಗಿ ಹಸುಗೂಸನ್ನು ಬಯಲಿಗೆಸೆದ ಯುವತಿ- ಮಗು ಸಾವು

ತುಮಕೂರು:  ಅಕ್ರಮ ಸಂಬಂಧದಿಂದ ಗರ್ಭಿಣಿಯಾಗಿದ್ದ ಯುವತಿ, ಮಗುವಿನ ಜನನವನ್ನೇ ಮರೆಮಾಚಿ ಹಸುಗೂಸಿಗೆ ಸಾವಿಗೆ ಕಾರಣವಾದ ಘಟನೆ ತುಮಕೂರಿನ ಅರೇಗುಜ್ಜನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮನೆಯಲ್ಲಿ ಲೂಸ್ ಲೂಸ್ ಬಟ್ಟೆ ಹಾಕಿಕೊಂಡು ಗರ್ಭ ಧರಿಸಿರೋದನ್ನೇ ಅವಿವಾಹಿತೆ ಮುಚ್ಚಿಟ್ಟಿದ್ದಳು.  ಕೊನೆಗೆ ಯಾರಿಗೂ ಗೊತ್ತಾಗದಂತೆ ತಾನೇ ಸ್ವಯಂ ಹೆರಿಗೆ ಮಾಡಿಕೊಂಡಿದ್ದಾಳೆ.  ಬಳಿಕ ಸಮಾಜಕ್ಕೆ ಹೆದರಿ ಹೆತ್ತಕೂಸನ್ನೇ ಬಯಲಿಗೆಸೆದಿದ್ದಾಳೆ.

ಮೂಲತಃ ಗೌರೀಪುರ ಗ್ರಾಮದ 25 ವರ್ಷದ ಯುವತಿ, ಪೋಷಕರು ಇಲ್ಲದ ಹಿನ್ನೆಲೆ ಯುವತಿ ಸ್ವಂತ ಅಕ್ಕನ ಮನೆಯಲ್ಲಿ ಆಶ್ರಯ ಪಡೆದಿದ್ದಳು.

ಮೊನ್ನೆ ರಾತ್ರಿ 10 ಗಂಟೆಯ ಸುಮಾರಿಗೆ ಮನೆಯಿಂದ ಹೊರಗೆ ಹೋಗಿ, ತಾನೇ ಸ್ವಯಂ ಹೆರಿಗೆ ಮಾಡಿಕೊಂಡಿದ್ದಾಳೆ. ನಂತರ ಮಗುವನ್ನ ಅಲ್ಲಿಯೇ ಪಕ್ಕದಲ್ಲಿ ಎಸೆದು ಮನೆಗೆ ತೆರಳಿದ್ದಾಳೆ. ಮನೆಗೆ ಹೋಗಿ ಋತುಚಕ್ರದ ಕಾರಣ ಹೇಳಿ ಸ್ನಾನ ಮಾಡಿದ್ದಾಳೆ. ಬೆಳಿಗ್ಗೆ ಗ್ರಾಮಸ್ಥರು ನವಜಾತ ಹೆಣ್ಣು ಮಗುವಿನ ಶವ ನೋಡಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಮಕ್ಕಳ ರಕ್ಷಣಾ ಘಟಕ, ಆರೋಗ್ಯ ಇಲಾಖೆ ಸಿಬ್ಬಂದಿಗೆ ಪೊಲೀಸರು ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ  ಪೊಲೀಸರು ಭೇಟಿ ನೀಡಿದ್ದಾರೆ.

ಆರೋಗ್ಯ ಇಲಾಖೆ ಸಿಬ್ಬಂದಿ ರಕ್ತಸ್ರಾವದಿಂದ ಬಳಲಿದ್ದ ಯುವತಿಯನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ನವಜಾತ ಶಿಶುವಿನ ಶವ ಕೂಡ ಶವಾಗಾರಕ್ಕೆ ರವಾನಿಸಿದ್ದಾರೆ.

ಘಟನೆಯ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

RELATED ARTICLES
- Advertisment -
Google search engine

Most Popular