ಗೃಹ ಸಚಿವರ ತವರು ಜಿಲ್ಲೆಯಲ್ಲೇ ಪೊಲೀಸ್ ವೈಫಲ್ಯ
ತುಮಕೂರು:ತುಮಕೂರು ಪೊಲೀಸ್ ಠಾಣೆಯಿಂದಲೇ ಕಳ್ಳತನದ ಆರೋಪಿಯೊಬ್ಬ ಕಾಣೆಯಾಗಿರುವ ಘಟನೆ ಗೃಹ ಸಚಿವರ ತವರು ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಗುಬ್ಬಿ ಪೊಲೀಸ್ ಠಾಣೆಯಿಂದ ಎಸ್ಕೇಪ್ ಆದ ಆರೋಪಿ ಸೈಯದ್ ಎಂದು ತಿಳಿದುಬಂದಿದೆ.
ಕಳ್ಳತನದ ಅಡಿಯಲ್ಲಿ ಆರೋಪಿಯನ್ನು ಸಿ.ಆರ್ ನಂ. 13/2024ರ ಪ್ರಕರಣದಲ್ಲಿ ಕರೆ ತಂದಿದ್ದು , ಕಳ್ಳತನ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು. ಬೆಂಗಳೂರಿನಲ್ಲಿ ಆರೋಪಿಯನ್ನು ಬಂಧಿಸಿ ಗುಬ್ಬಿಠಾಣೆಗೆ ಕರೆ ತಂದಿದ್ದರು ಎಂದು ತಿಳಿದುಬಂದಿದೆ. ಇಂದು ಬೆಳಗ್ಗೆ ಸುಮಾರು 4:30ರ ಸಮಯದಲ್ಲಿ ಠಾಣೆಯಿಂದ ಆರೋಪಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಆರೋಪಿ ಎಡಗೈ ಮೇಲೆ ಸಿರಿಗನ್ನಡಂ, ಬಲಗೈ ಮೇಲೆ ಎಲ್ಲಾ ಧರ್ಮದ ಅಚ್ಚೆ ಇರೋದಾಗಿ ಮಾಹಿತಿ ತಿಳಿದು ಬಂದಿದೆ. ಗದಗ ಜಿಲ್ಲೆಯ ಹುಲ್ಲೂರು ಗ್ರಾಮದ ವಾಸಿ ಸೈಯದ್ ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿ ಕಾರ್ಯನಿರ್ವಹಿಸುತ್ತಿದ್ದ, ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.