ತುಮಕೂರು: ಪಾವಗಡ ತಾಲೂಕಿನ ನಾಗಲ ಮಡಿಕೆ ತಿಮ್ಮಮ್ಮನಹಳ್ಳಿಯಲ್ಲಿ ಸುಬ್ಬಯ್ಯ ಎನ್ನುವವರಿಂದ ಅಕ್ಕಮ್ಮ ಎನ್ನುವವರ ಮೇಲೆ ದಾಳಿ ನಡೆದಿದೆ.ತಿಮ್ಮಮ್ಮನಹಳ್ಳಿಯಿಂದ ಉಪ್ಪಾರಹಳ್ಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ದಾರಿ ಇದಾಗಿದ್ದು, ಸಾರ್ವಜನಿಕರು ಓಡಾಡುವ ದಾರಿಯಲ್ಲಿ ಕಲ್ಲು ಹಾಕಿ ಸುಬ್ಬಯ್ಯ ರಸ್ತೆ ಬಂದ್ ಮಾಡಿದ್ದ ಹಿನ್ನೆಲೆ ದಾರಿ ಬಿಡುವಂತೆ ಅಕ್ಕಮ್ಮ ಪ್ರಶ್ನೆ ಮಾಡಿದ್ದು, ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿ ಜಮೀನಿನಲ್ಲಿ ಇರುವ ಸೈಜುಗಲ್ಲು ತಲೆ ಮೇಲೆ ಎತ್ತಾಕಿ ಕೊಲೆಗೆ ಯತ್ನ ನಡೆಸಿದ್ದು, ಅಕ್ಕಮ್ಮರ ಸೊಂಟ ಮತ್ತು ಕಾಲಿಗೆ ಗಂಭೀರ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಅಕ್ಕಮ್ಮರನ್ನು ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ತಿರುಮಣಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.