Saturday, April 19, 2025
Google search engine

Homeರಾಜ್ಯತುಮಕೂರು: ಅನಾರೋಗ್ಯದಿಂದ ಬಿಎಸ್ ಎಫ್ ಯೋಧ ನಿಧನ

ತುಮಕೂರು: ಅನಾರೋಗ್ಯದಿಂದ ಬಿಎಸ್ ಎಫ್ ಯೋಧ ನಿಧನ

ತುಮಕೂರು: ಬಿಎಸ್ ಎಫ್ ಯೋಧನಾಗಿ ಕಾರ್ಯನಿರ್ವಹಿಸುತ್ತಿದ್ದ  ಯೋಧ ಅನಾರೋಗ್ಯದಿಂದ ಯೋಧ ನಿಧನರಾಗಿದ್ದಾರೆ.

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಶ್ರೀರಂಗಪುರ ನಿವಾಸಿ ಎಸ್.ಜಿ ಸುರೇಶ್ ಕುಮಾರ್(36) ಮೃತ ಯೋಧ.

ಪಂಜಾಬ್ ನ ಪಠಾಣ್ ಕೋಟ್‌ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಿಡ್ನಿ ವೈಪಲ್ಯದಿಂದ ಚಂಡಿಗಢ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಇವರು ಜಯರಾಮರೆಡ್ಡಿ- ಸುದಮ್ಮ ದಂಪತಿಯ ಹಿರಿಯ ಮಗನಾಗಿದ್ದು, ಇಬ್ಬರು ಮಕ್ಕಳು, ಪತ್ನಿಯನ್ನು ಅಗಲಿದ್ದಾರೆ.

ಯೋಧ ಎಸ್.ಜಿ ಸುರೇಶ್ ಪತ್ನಿಗೆ ಎರಡನೇ ಮಗುವಿನ ಹೆರಿಗೆಗೆಂದು ಒಂದು ತಿಂಗಳ ಹಿಂದೆ ಊರಿಗೆ ಬಂದು ಹೋಗಿದ್ದರು.

ಇಂದು ಸ್ವಗ್ರಾಮಕ್ಕೆ ಪಾರ್ಥಿವ ಶರೀರ ಆಗಮಿಸಲಿದ್ದು, ನಾಳೆ ಸ್ವಗ್ರಾಮದಲ್ಲಿ ಸುರೇಶ್ ಕುಮಾರ್ ರವರ ಅಂತ್ಯಕ್ರಿಯೆ ನಡೆಯಲಿದೆ.

RELATED ARTICLES
- Advertisment -
Google search engine

Most Popular