ತುಮಕೂರು: ನಾಯಿಗಳ ದಾಳಿಗೆ ಎಂಟು ತಿಂಗಳ ಚಿರತೆ ಮರಿ ಸಾವನ್ನಪ್ಪಿರುವ ಘಟನೆ ತುಮಕೂರು ತಾಲೂಕಿನ ಮಾವುಕೆರೆ ಗ್ರಾಮದಲ್ಲಿ ನಡೆದಿದೆ.
ಕೆಲದಿನಗಳಿಂದ ಕೋರಾ ಹೋಬಳಿ ಸುತ್ತಮುತ್ತ ಚಿರತೆ ಮರಿ ಕಾಣಿಸಿಕೊಳ್ಳುತ್ತಿತ್ತು. ರಾತ್ರೋರಾತ್ರಿ ನಾಯಿಗಳು ಸುಮಾರು ಎಂಟು ತಿಂಗಳ ಚಿರತೆ ಮೇಲೆ ನಾಯಿಗಳು ದಾಳಿ ನಡೆಸಿದ ಪರಿಣಾಮ ಚಿರತೆ ಸಾವನ್ನಪ್ಪಿದೆ.
ಹಲವು ಭಾರಿ ಜನತೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ ಅರಣ್ಯಾಧಿಕಾರಿಗಳು ಕ್ರಮ ಕೈಗೊಂಡಿರಿಲಿಲ್ಲ. ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಚಿರತೆ ಸಾವಿಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸ್ಥಳಕ್ಕೆ ವಲಯ ಅರಣ್ಯಾಧಿಕಾರಿಗಳು ಭೇಟಿ, ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆಯ ಶವ ಪರೀಕ್ಷಾ ವರದಿಯಲ್ಲಿ ನಾಯಿಗಳ ದಾಳಿಗೆ ಸಾವನ್ನಪ್ಪಿರುವುದು ದೃಢವಾಗಿದೆ.