ತುಮಕೂರು: ಸ್ಮಾರ್ಟ್ ಸಿಟಿ ತುಮಕೂರಲ್ಲಿ ತಡರಾತ್ರಿ ಸುರಿದ ಭರ್ಜರಿ ಮಳೆಗೆ ರಸ್ತೆಗಳು ಜಲಾವೃತವಾಗಿದ್ದು, ತುಮಕೂರಿನ ಮೇಳೆಕೋಟೆ ಹಾಗೂ ಇತರೆ ಮುಖ್ಯರಸ್ತೆಗಳಲ್ಲಿ ಮಳೆ ನೀರು ನಿಂತಿದೆ.
ಕಾಮಗಾರಿಗಾಗಿ ರಸ್ತೆಯನ್ನ ಕಂಟ್ರಾಕ್ಟರ್ ಕಿತ್ತು ಹಾಕಿದ್ದರು. ರಸ್ತೆ ಕಿತ್ತುಹಾಕಿದ್ದರ ಪರಿಣಾಮ ರಸ್ತೆಯಲ್ಲೇ ಮಳೆ ನೀರು ನಿಂತಿದ್ದು, ಸಾರ್ವಜನಿಕ ಸಂಚಾರಕ್ಕೆ ಭಾರೀ ತೊಂದರೆಯಾಗಿದೆ.
ನೀರನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕಾಗಿ ಸಾರ್ವಜನಿಕರು ಮನವಿ ಮಾಡಿದ್ದಾರೆ.