ತುಮಕೂರು: ಅತಿಯಾದ ಭಾರ ತಾಳಲಾರದೇ ಲಾರಿಯ ಎಂಜಿನ್ ಮೇಲೆದ್ದು ನಿಂತಿರುವ ಘಟನೆ ತುಮಕೂರಿನ ಟೌನ್‌ಹಾಲ್ ವೃತ್ತದಲ್ಲಿ ನಡೆದಿದೆ.
ಟೌನ್‌ಹಾಲ್ ವೃತ್ತದ ಸಿಗ್ನಲ್ ಬಳಿ ಬರುತ್ತಿದ್ದಂತೆ ಅಪ್ಪು ಹತ್ತಲು ಸಾಧ್ಯವಾಗದೇ ಕೆಎ 03 ಎಎ 1911 ಸಂಖ್ಯೆ ಹೊಂದಿರುವ ಲಾರಿ ತಲೆ ಎತ್ತಿ ನಿಂತಿದೆ.
ಲಾರಿಯಲ್ಲಿ ಅತಿ ಭಾರದ ಮರದ ದಿಮ್ಮಿಗಳನ್ನು ಸಾಗಿಸಲಾಗುತ್ತಿದ್ದು, ಮುಂದೆ ಸಾಗಲು ಜರ್ಕ್ ಹೊಡೆದ ಸಂದರ್ಭದಲ್ಲಿ ಮರದ ದಿಮ್ಮಿಗಳು ಹಿಂದಕ್ಕೆ ಜಾರಿವೆ.
ಇದರಿಂದಾಗಿ ಸ್ಥಳದಲ್ಲಿ ಕೆಲಹೊತ್ತು ಸಂಚಾರ ಅಸ್ತವ್ಯಸ್ತ ಉಂಟಾಗಿತ್ತು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಕ್ರೇನ್ ಮೂಲಕ ಲಾರಿ ಸಾಗಿಸಲು ನೆರವಾಗಿದ್ದಾರೆ.