ತುಮಕೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಸಲುವಾಗಿ ಕೆವೈಸಿ ಮಾಡಿಸಲು ಇಂದು ಬೆಳ್ಳಂಬೆಳಗ್ಗೆ ತುಮಕೂರು ಜಿಲ್ಲೆ ಪಾವಗಡ ಪಟ್ಟಣದ ಎಸ್ ಬಿಐ ಬ್ಯಾಂಕ್ ಮುಂದೆ ಜನರ ನೂಕುನುಗ್ಗಲು ಉಂಟಾಗಿದೆ.
ಪಾವಗಡ ಪಟ್ಟಣದ ಎಸ್ ಬಿಐ ಶಾಖೆ ತಾಲೂಕಿನಲ್ಲೇ ಅತಿ ಹೆಚ್ಚು ಖಾತೆ ಹೊಂದಿದ್ದು, ತಮ್ಮ ಖಾತೆಗೆ ಆಧಾರ್, ಪ್ಯಾನ್, ಮೊಬೈಲ್ ನಂಬರ್ ಲಿಂಕ್ ಮಾಡಲು ಜನರು ಮುಗಿಬಿದ್ದಿದ್ದಾರೆ.
ಸರ್ಕಾರ ಯೋಜನೆಗಳಿಗಾಗಿ ಹಲವು ವರ್ಷಗಳಿಂದ ಟ್ರ್ಯಾನ್ಸಕ್ಷನ್ ಇಲ್ಲದೇ ಸ್ಥಗಿತಗೊಂಡಿದ್ದ ಬ್ಯಾಂಕ್ ಖಾತೆಗಳನ್ನು ಮರುಚಾಲನೆ ಮಾಡಿಕೊಳ್ಳಲು ಬ್ಯಾಂಕ್ ಗ್ರಾಹಕರು ಮುಂದಾಗಿದ್ದಾರೆ. ಈ ಹಿನ್ನಲೆ ನಿತ್ಯ ಕಾಯಕ ಬಿಟ್ಟು ಬ್ಯಾಂಕ್ ಗೆ ಹಳ್ಳಿ ಜನರು ಅಲೆದಾಡುತ್ತಿರುವುದು ಕಂಡುಬಂದಿದೆ.