ತುಮಕೂರು: ಎಮ್ಮೆ ಮೈ ತೊಳೆಯಲು ಹೋಗಿ ಇಬ್ಬರು ಬಾಲಕರು ನೀರುಪಾಲಾದ ಘಟನೆ ತುಮಕೂರು ತಾಲೂಕಿನ ಅರೆಯೂರು ಸಮೀಪದ ದೇವರಹಟ್ಟಿ ಕಟ್ಟೆಯಲ್ಲಿ ನಡೆದಿದೆ.
ಮನೋಜ್ (12) ಹಾಗೂ ಚಿರಂತ್ (14) ಮೃತ ದುರ್ದೈವಿಗಳು.
ಬಾಲಕರ ಶವಗಳಿಗಾಗಿ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಹುಡುಕಾಟ ನಡೆಸಲಾಗುತ್ತಿದೆ. ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ.
ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.