Thursday, November 27, 2025
Google search engine

Homeರಾಜ್ಯತುಂಗಭದ್ರಾ ಡ್ಯಾಂ ದುರಸ್ತಿ ನೆಪ : ನೀರು ಬಿಡದೆ ರೈತರಿಗೆ ಅನ್ಯಾಯ

ತುಂಗಭದ್ರಾ ಡ್ಯಾಂ ದುರಸ್ತಿ ನೆಪ : ನೀರು ಬಿಡದೆ ರೈತರಿಗೆ ಅನ್ಯಾಯ

ಬೆಂಗಳೂರು: ಸಿಎಂ ಕುರ್ಚಿ ಕಿತ್ತಾಟದಲ್ಲಿ ರಾಜ್ಯದ ಆಡಳಿತ ಮುಳುಗಿದ್ದು, ತುಂಗಭದ್ರಾ ಅಣೆಕಟ್ಟು ಕ್ರೆಸ್ಟ್-ಗೇಟ್ ಅಳವಡಿಕೆ ಯೋಜನೆಗೆ ಅನುಮೋದನೆ ವಿಳಂಬ ಮಾಡುವ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಬಿಜೆಪಿ ಕಾಂಗ್ರೇಸ್‌ ಪಕ್ಷದ ವಿರುದ್ದ ಕಿಡಿಕಾರಿದೆ. ಹೊಸಪೇಟೆಯ ಟಿಬಿ ಅಣೆಕಟ್ಟು ಬಳಿ ನಿರ್ಮಾಣ ಹಂತದಲ್ಲಿರುವ ಕ್ರೆಸ್ಟ್ ಗೇಟ್‌ಗಳನ್ನು ಪರಿಶೀಲಿಸಿದ ನಂತರ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಈ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

33 ಕ್ರೆಸ್ಟ್ ಗೇಟ್‌ಗಳನ್ನು ವಿವಿಧ ಕಂಪನಿಗಳಿಗೆ ಹಂಚಿಕೆ ಮಾಡಿದ್ದು, ಕಾಂಗ್ರೆಸ್ ಸರ್ಕಾರ ಇಲ್ಲಿಯವರೆಗೆ ಕೇವಲ 16 ಗೇಟ್ ಗಳನ್ನಷ್ಟೇ ಅಳವಡಿಸಿದೆ. ಇದರ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ ಎಂದಿದ್ದಾರೆ. ಮುಂದಿನ ಮಳೆಗಾಲದ ಮೊದಲು ಗೇಟ್‌ಗಳನ್ನು ಅಳವಡಿಸುವ ಸಾಧ್ಯತೆಗಳಿಲ್ಲ ಎಂಬಂತೆ ತೋರುತ್ತಿದೆ ಎಂದು ಲೇವಡಿ ಮಾಡಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೇಲಿನ ಸಿಎಂ ಸಿದ್ದರಾಮಯ್ಯ ಅವರ ಕೋಪ ಜಲಸಂಪನ್ಮೂಲ ಇಲಾಖೆಗೆ ಹಣವನ್ನು ತಡೆಹಿಡಿಯುವಲ್ಲಿ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ. ಇದಲ್ಲದೇ ಸಿದ್ದರಾಮಯ್ಯ ಅವರು ಅಣೆಕಟ್ಟು ಸ್ಥಳಕ್ಕೆ ಭೇಟಿ ನೀಡಿ, ಕ್ರೆಸ್ಟ್ ಗೇಟ್ ಅಳವಡಿಕೆ ಕಾಮಗಾರಿಗಳನ್ನು ತಕ್ಷಣ ಆರಂಭಿಸಬೇಕೆಂದು ಹಾಗೂ ಎರಡನೇ ಬೆಳೆಗೆ ನೀರು ಬಿಡದ ಕಾರಣ ರೈತರಿಗೆ ಪರಿಹಾರವಾಗಿ ಎಕರೆಗೆ 25,000 ರೂ.ಗಳನ್ನು ಸರ್ಕಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ನಂತರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಸಿದ್ದರಾಮಯ್ಯ ಹೆಸರಿಗೆ ಮಾತ್ರ ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ರಾಜಕೀಯ ನಾಟಕಕ್ಕಾಗಿ ಸಂವಿಧಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ.

ಜವಾಹರಲಾಲ್ ನೆಹರು ಸಂವಿಧಾನ ರಚನೆಯ ಜವಾಬ್ದಾರಿಯನ್ನು ಬ್ರಿಟಿಷ್ ಅಧಿಕಾರಿಯೊಬ್ಬರಿಗೆ ವಹಿಸಿದ್ದರು, ಇದು ಗೊಂದಲಕ್ಕೆ ಕಾರಣವಾಗಿ. ನಂತರ ಡಾ. ಬಿ. ಆರ್. ಅಂಬೇಡ್ಕರ್ ನ್ನು ಬೆಂಬಲಿಸಿ ಗಾಂಧೀಜಿ ಮಧ್ಯಪ್ರವೇಶಿಸಿದರು. ಅದಲ್ಲದೇ ಮಹಾರಾಷ್ಟ್ರದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ನೆಹರೂ ಅಂಬೇಡ್ಕರ್ ವಿರುದ್ಧ ಪ್ರಚಾರ ಮಾಡಿದ್ದರು. ಅಂಬೇಡ್ಕರ್ ಮರಣದ ನಂತರವೂ ಸ್ಮಾರಕಕ್ಕಾಗಿ ಒಂದು ಸಣ್ಣ ಜಾಗವನ್ನು ಸಹ ಕಾಂಗ್ರೆಸ್ ನೀಡಲಿಲ್ಲ. ಅಂತಹ ಜನರಿಗೆ ಅಂಬೇಡ್ಕರ್ ಹೆಸರನ್ನು ತೆಗೆದುಕೊಳ್ಳುವ ನೈತಿಕ ಹಕ್ಕಿಲ್ಲ ಎಂದು ಕಿಡಿಕಾರಿದ್ದಾರೆ. ಪ್ರಧಾನಿ ಮೋದಿ ಅವರು ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಐದು ತಾಣಗಳ ಅಭಿವೃದ್ಧಿಯನ್ನು ಪ್ರಾರಂಭಿಸಿದ್ದು, ಸಂವಿಧಾನ ದಿನವನ್ನು ಮೋದಿ ಆರಂಭಿಸಿರುವುದರಿಂದ ಕಾಂಗ್ರೆಸ್ ಆತಂಕಗೊಂಡಿದೆ ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular