ಕೊಪ್ಪಳ: ತುಂಗಭದ್ರಾ ಜಲಾಶಯದ ೧೯ನೇ ಗೇಟ್‌ಗೆ ಮೊದಲ ಸ್ಟಾಪ್ ಲಾಗ್ ಅಳವಡಿಕೆ ಕಾರ್ಯಾಚರಣೆ ಡ್ಯಾಂ ತಜ್ಞ ಕನ್ಹಯ್ಯ ನೇತೃತ್ವದಲ್ಲಿ ಯಶಸ್ವಿಯಾಗಿದೆ. ಕಿತ್ತು ಹೋಗಿದ್ದ ಗೇಟ್ ನಂಬರ್ ೧೯ರ ಜಾಗದಲ್ಲಿ ಸ್ಟಾಪ್ ಲಾಗ್ ಅಳವಡಿಸಲಾಗಿದೆ.
ಪ್ರತಿಯೊಬ್ಬರಿಗೂ ವಿಚಾರವನ್ನು ಸಚಿವ ಶಿವರಾಜ್ ತಂಗಡಗಿ ಹಂಚಿಕೊಂಡಿದ್ದಾರೆ. ತುಂಗಭದ್ರಾ ಜಲಾಶಯದ ೧೯ನೇ ಕ್ರಸ್ಟ್ ಗೇಟ್‌ಗೆ ಸ್ಟಾಪ್ ಲಾಗ್ ಅಳವಡಿಕೆಗೂ ಮುನ್ನ, ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಕಾರ್ಯ ಯಶಸ್ವಿಯಾಗುವಂತೆ ಭಗವಂತನಲ್ಲಿ ಪ್ರಾರ್ಥಿಸಿ ಸಚಿವರು ಪೂಜೆ ಕಾರ್ಯ ನೆರವೇರಿಸಿದ್ದರು. ಈ ಕಾರ್ಯ ಯಶಸ್ವಿಯಾದ ಬೆನ್ನಲ್ಲೇ ಜಲಾಶಯದಲ್ಲೇ ಶಾಸಕರು, ಸಂಸದರು, ಸ್ಟಾಪ್ ಲಾಗ್ ಅಳವಡಿಕೆ ಸಿಬ್ಬಂದಿ, ಅಧಿಕಾರಿಗಳಿಗೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಸದ್ಯ ೬೦ ಅಡಿ ಅಗಲ ೪ ಅಡಿ ಉದ್ದದ ಮೊದಲ ಸ್ಟಾಪ್ ಲಾಗ್ ಅನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ.
ತುಂಗಭದ್ರಾ ಜಲಾಶಯದ ೧೯ನೇ ಗೇಟ್‌ಗೆ ಮೊದಲ ಸ್ಟಾಪ್ ಲಾಗ್ ಅಳವಡಿಕೆ ಕಾರ್ಯ ಯಶಸ್ವಿಗೊಂಡಿದೆ ಎಂದು ತಿಳಿಸಿರುವ ಸಚಿವರು, ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಯಶಸ್ವಿಗೆ ಶ್ರಮಿಸಿದ ತಜ್ಞರಾದ ಕನ್ನಯ್ಯ ನಾಯ್ಡುರವರಿಗೆ, ನೀರಾವರಿ ಇಲಾಖೆ ಅಧಿಕಾರಿಗಳಿಗೆ, ಸಮಸ್ತ ಸಿಬ್ಬಂದಿ ವರ್ಗಕ್ಕೆ, ಜಿಂದಾಲ ಕಂಪನಿಯವರಿಗೆ, ಹಿಂದುಸ್ತಾನ ಮತ್ತು ನಾರಾಯಣ ಇಂಜಿನಿಯರಿಂಗ್ ವರ್ಕ್ಸ್ ನವರಿಗೆ, ಭದ್ರತಾ ಕಾರ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಪೊಲೀಸ್ ಸಿಬ್ಬಂಧಿಯವರಿಗೆ, ಅಗ್ನಿಶಾಮಕ ದಳದವರಿಗೆ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ತಾವರು ಧನ್ಯವಾದ ತಿಳಿಸಿದ್ದಾರೆ.