ಬಳ್ಳಾರಿ: ಬಳ್ಳಾರಿಯ ಕೊಳಗಲ್ ಗ್ರಾಮದ ಹೊರ ವಲಯದ ಹೆಚ್ ಎಲ್ ಸಿ ಕಾಲುವೆಗೆ ಬೊಂಗಾ ಬಿದ್ದು, ಅಪಾರ ಪ್ರಮಾಣದ ನೀರು ಪೋಲಾದ ಘಟನೆ ನಡೆದಿದೆ.
ವಿಷಯ ತಿಳಿದ ತುಂಗಭದ್ರ ಮಂಡಳಿಯ ಅಧಿಕಾರಿಗಳು ದುರಸ್ಥಿಗೊಳಿಸಲು ಹರಸಾಹಸ ಪಡುತ್ತಿದ್ದಾರೆ.
ಕರ್ನಾಟಕ ಆಂದ್ರದ ಹತ್ತಾರು ಜಿಲ್ಲೆಗಳಿಗೆ ಜೀವನಾಡಿಯಾಗಿರುವ ತುಂಗಭದ್ರ ಜಲಾಶಯ ಇನ್ನೇನು ತುಂಬಲಿದೆ ಎನ್ನುವ ಸಮಯದಲ್ಲಿ ಮಳೆ ಬಾರದೆ ಸಂಕಷ್ಟ ಎದುರಿಸುತ್ತಿರುವ ಅನ್ನದಾತನಿಗೆ, ಜಲಾಶಯದಿಂದ ಆಂದ್ರದ ಕೋಟಾದಡಿ ಅನ್ನದಾತನ ಕಣ್ಣಮುಂದೆ ಆಂದ್ರಕ್ಕೆ ಹೆಚ್ ಎಲ್ಸಿ ಕಾಲುವೆ ಮೂಲಕ ನೀರು ಹರಿಸಲಾಗುತ್ತಿತ್ತು.
ಪಕ್ಕದಲ್ಲೆ ನೀರು ಹರಿದರು ನಮ್ಮ ರೈತರು ನೀರು ಪಡೆಯುವಂತಿಲ್ಲ. ಆದ್ರೆ, ನಿನ್ನೆ ಸಂಜೆ ಕಾಲುವೆಗೆ ಬೊಂಗಾ ಬಿದ್ದು ಅಪಾರ ಪ್ರಮಾಣದ ನೀರು ಪೋಲಾಗಿ ಹರಿಯುತ್ತಿರುವುದು. ರೈತರಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.
ಜಮೀನುಗಳಲ್ಲಿ ಒಂದು ಕಡೆ ನೀರಿಲ್ಲದೆ ಬೆಳೆ ಸಂಪೂರ್ಣ ಒಣಗುತ್ತಿದ್ದು, ಇನ್ನೊಂದು ಕಡೆ ಕಾಲುವೆ ನೀರು ಕಣ್ಣಮುಂದೆ ಪೋಲಾಗುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.