Tuesday, September 2, 2025
Google search engine

Homeಅಪರಾಧಪಣಂಬೂರು ರೈಲ್ವೆ ಸ್ಟೇಶನ್ ಬಳಿ ಗಾಂಜಾ ಸಾಗಾಟ: ಇಬ್ಬರು ಆರೋಪಿಗಳು ಬಂಧನ

ಪಣಂಬೂರು ರೈಲ್ವೆ ಸ್ಟೇಶನ್ ಬಳಿ ಗಾಂಜಾ ಸಾಗಾಟ: ಇಬ್ಬರು ಆರೋಪಿಗಳು ಬಂಧನ

ಮಂಗಳೂರು (ದಕ್ಷಿಣ ಕನ್ನಡ): ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ 62 ನೇ ತೋಕೂರು ಗ್ರಾಮದ ರೈಲ್ವೇ ಸ್ಟೇಶನ್ ಬಳಿ ಮಾದಕ ವಸ್ತು ಸಾಗಾಟ ಮತ್ತು ಮಾರಾಟ ಆರೋಪದಲ್ಲಿ ಬಿಹಾರದ ಇಬ್ಬರು ಆರೋಪಿಗಳನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.

ಬಿಹಾರ ರಾಜ್ಯದ ಅರ್ನೌಟ್ ಗ್ರಾಮದ ಹರ್ಷ ಕುಮಾರ್ (22 ) ಮತ್ತು ಶಾಪುರ್ ಗ್ರಾಮದ ಅಮರ್ ಕುಮಾರ (28) ಬಂಧಿತ ಆರೋಪಿಗಳು. ಹರ್ಷ ಕುಮಾರ್ ಎಂಬಾತನಿಂದ 1 ಕೆ ಜಿ 230 ಗ್ರಾಂ ಮತ್ತು ಅಮರ್ ಕುಮಾರ್ ನಿಂದ 80 ಗ್ರಾಂ ಗಾಂಜಾ ಮಾದಕ ವಸ್ತುವನ್ನು ವಶಕ್ಕೆ ಪಡೆಯಲಾಗಿದೆ.

ಇದರ ಮೌಲ್ಯ ಸುಮಾರು 75,000 ರೂಪಾಯಿ. ಆರೋಪಿಗಳು ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ಮಾದಕ ವಸ್ತುಗಳನ್ನು ಮಾರಾಟ ಮಾಡುವ ಸಲುವಾಗಿ ಉಪಯೋಗಿಸುತ್ತಿದ್ದ 2 ಮೊಬೈಲ್ ಪೋನ್‌ಗಳನ್ನು ಸ್ವಾಧೀನಪಡಿಸಲಾಗಿದೆ. ಆರೋಪಿಗಳ ಪೈಕಿ ಒಬ್ಬಾತನು ಬಿಹಾರದ ಪಾಟ್ನಾದಲ್ಲಿ ಮೀಶೋ ಮತ್ತು ಫ್ಲಿಫ್ ಕಾರ್ಟ್ ಹಬ್ ನಲ್ಲಿ ಮತ್ತು ಇನ್ನೊಬ್ಬಾತ ದಿಲ್ಲಿಯಲ್ಲಿ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ.

RELATED ARTICLES
- Advertisment -
Google search engine

Most Popular