ವರದಿ: ಸ್ಟೀಫನ್ ಜೇಮ್ಸ್
ಬೆಳಗಾವಿ: ರಾಜ್ಯದಲ್ಲಿ ಎರಡೂವರೆ ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯನವರು ಮಾತ್ರ ಮಜಾ ಮಾಡಿಕೊಂಡು ಇದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ ವಾಗ್ದಾಳಿ ನಡೆಸಿದರು.
ಶುಕ್ರವಾರ ಕಿತ್ತೂರು ತಾಲೂಕಿನ ನೇಸರಗಿ ಗ್ರಾಮದ ಜಮೀನಿನಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೇಲೆ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಅವರ ಸಮಸ್ಯೆಗೆ ಧಾವಿಸಬೇಕಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಮಜಾ ಮಾಡಿಕೊಂಡಿದ್ದಾರೆ ಎಂದು ಹರಿಹಾಯ್ದರು.
ಸೋಯಾಬಿನ್ ಬೆಳೆಗಳು ಸಂಪೂರ್ಣ ನೆಲ ಕಚ್ಚಿವೆ. ರೈತರ ಕಷ್ಟಗಳನ್ನು ಸರಕಾರದ ಗಮನಕ್ಕೆ ತಂದು ಪರಿಹಾರ ಕೊಡಿಸುವ ಕೆಲಸ ಮಾಲಾಗುವುದು. ಸೋಯಾಬಿನ್ ಬೆಳೆ ಹಾನಿ ಪ್ರದೇಶಗಳಲ್ಲಿ ಭೇಟಿ ನೀಡಿದ್ದೇವೆ. ಇದರಲ್ಲಿ ರಾಜಕೀಯ ಮಾಡಲು ಬಂದಿಲ್ಲ. ರಾಜ್ಯ ಸರಕಾರ ಬದುಕಿದ್ದರೆ ಬೆಳೆ ಹಾನಿ ಸಮೀಕ್ಷೆ ನಡೆಸಿ ಪರಿಹಾರ ಬಿಡುಗಡೆ ಮಾಡಿ ಕೇಂದ್ರ ಸರಕಾರಕ್ಕೆ ಪರಿಹಾರ ಘೋಷಣೆ ಮಾಡಿದ್ದೇವೆ. ಅನುದಾನ ಕೊಡಿ ಎಂದು ಹೇಳಬೇಕಿತ್ತು. ಆದರೆ ಸಿಎಂ ಸಿದ್ದರಾಮಯ್ಯ ಯಾವ ಗೋಜಿಗೂ ಹೋಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಏನಕ್ಕೆ ಐದು ವರ್ಷ ಸಿಎಂ ಆಗಿರುತ್ತಿರಿ ಸಿದ್ದರಾಮಯ್ಯ ಅವರೇ ಒಳ್ಳೆಯ ಆಡಳಿತ ಮಾಡಲು ಐದು ವರ್ಷ ಸಿಎಂ ಆಗಲು ಯಾವ ಪುರುಷಾರ್ಥಕ್ಕಾಗಿ ಎಂದು ವಾಗ್ದಾಳಿ ನಡೆಸಿದರು. ಸರಕಾರ ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ನಾಮ ಹಾಕುವ ಕೆಲಸ ಮಾಡುತ್ತಿದ್ದಾರೆ. 12 ತಿಂಗಳು ಗೃಹಲಕ್ಷೀ ಹಣ ಕೂಡಿಟ್ಟು ವಾಷ್ಮಿಂಗ್ ಮಷಿನ್ ತೆಗೆದುಕೊಂಡಿದ್ದಾರೆ ಎನ್ನುವ ಸರಕಾರ ರೈತರು ವಾಸಿಂಗ್ ಆಗುತ್ತಿದ್ದಾರೆ. ಮೊದಲು ಇತ್ತ ಗಮನ ಕೊಡಿ ಎಂದರು.
ಎಕರೆಗೆ 25 ಸಾವಿರ, ನೀರಾವರಿ ಯೋಜನೆಯ ಬೆಳೆ ಹಾನಿಗೆ 50 ಸಾವಿರ ಬೆಳೆ ಪರಿಹಾರ ಸರಕಾರ ಕೊಡಬೇಕು. ಏಂಟುವರೆ ಸಾವಿರ ರೂ. ಪರಿಹಾರ ಏತಕ್ಕೂ ಸಾಲುವುದಿಲ್ಲ. ರೈತರ ಬೆಳೆ ಕೈಗೆ ಬಂದಿದ್ದರೇ ಲಕ್ಷಾಂತರ ರೂ. ಹಣ ಬರುತ್ತಿತ್ತು ಎಂದರು. ರೈತರಿಗೆ ಲಾಭ ಬೇಡಿ. ಆತ ಬೆಳೆಗೆ ಗೊಬ್ಬರ, ಉಳಿಮೆ ಮಾಡಿರುವ ಖರ್ಚು ಆದರೂ ಕೊಡಿ. ಸರಕಾರ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದರು.