Sunday, October 12, 2025
Google search engine

Homeರಾಜ್ಯಸುದ್ದಿಜಾಲಅವಹೇಳನ ಆರೋಪ : ಚಿತ್ರನಟ ಜಯಕೃಷ್ಣನ್ ಸಹಿತ ಇಬ್ಬರ ಬಂಧನ

ಅವಹೇಳನ ಆರೋಪ : ಚಿತ್ರನಟ ಜಯಕೃಷ್ಣನ್ ಸಹಿತ ಇಬ್ಬರ ಬಂಧನ

ಮಂಗಳೂರು : ಕ್ಯಾಬ್ ಚಾಲಕನನ್ನು ʼಮುಸ್ಲಿಂ ಟೆರರಿಸ್ಟ್ʼ ಎಂದು ಅವಹೇಳನಗೈದ ಆರೋಪದ ಮೇರೆಗೆ ಮಲಯಾಳಂನ ಚಿತ್ರನಟ ಜಯಕೃಷ್ಣನ್ ಸಹಿತ ಇಬ್ಬರನ್ನು ನಗರದ ಉರ್ವ ಠಾಣೆಯ ಶನಿವಾರ ಬಂಧಿಸಿದ್ದಾರೆ.

ಅದರಂತೆ ಅ.10ರಂದು ಉರ್ವ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 352, 353(2) ಬಿಎನ್ಎಸ್ರಂತೆ ಪ್ರಕರಣ ದಾಖಲಿಸಿದ ಪೊಲೀಸರು ಮಲಯಾಳಂನ ಚಿತ್ರನಟ ಜಯಕೃಷ್ಣನ್ ಮತ್ತು ಸಂತೋಷ್ ಅಬ್ರಹಾಂನನ್ನು ಬಂಧಿಸಿದ್ದಾರೆ.

09.10.2025 ರಂದು ರಾತ್ರಿ ಕೇರಳ ಮೂಲದ ಸಂತೋಷ್ ಅಬ್ರಾಹಂ, ಜಯಕೃಷ್ಣನ್ ಮತ್ತು ವಿಮಲ್ ಎಂಬುವವರು Uber ಮತ್ತು Rapido Captain ಆಪ್ ಮೂಲಕ ಕ್ಯಾಬ್ ಬುಕ್ ಮಾಡಿ ಬಿಜೈ ನ್ಯೂ ರೊಡ್, ಮಂಗಳೂರು ಪಿಕ್ ಆಪ್ ಆಡ್ರೆಸ್ ನೀಡಿದ್ದರು. ಇದನ್ನು ನೋಡಿ ದೂರುದಾರರಾದ ಕ್ಯಾಬ್ ಚಾಲಕ ಅಹ್ಮದ್ ಶಫೀಕ್ ರವರು ಆಪ್ ಮೂಲಕ ಕಾಲ್ ಮಾಡಿ ಪಿಕಪ್ ಬಗ್ಗೆ ವಿಚಾರಿಸಿದಾಗ ಆಕಡೆಯಿಂದ ಹಿಂದಿ ಭಾಷೆಯಲ್ಲಿ ಮಾತನಾಡಿ ಕ್ಯಾಬ್ ಚಾಲಕನನ್ನು ಮುಸ್ಲಿಂ ತೀವ್ರವಾದಿ, ಟೆರರಿಸ್ಟ್, ಎಂದು ಅಪಹಾಸ್ಯವಾಗಿ ಮಾತನಾಡಿ, ಮುಸ್ಲಿಮ್ ಟೆರರಿಸ್ಟ್ ಎಂದು ಹಿಂದಿ ಭಾಷೆಯಲ್ಲಿ ಬೊಬ್ಬೆ ಹಾಕಿ, ಮಲಯಾಳಂ ಭಾಷೆಯಲ್ಲಿ ತಾಯಿಗೆ ಅವಾಚ್ಯವಾಗಿ ಬೈದಿದ್ದಾರೆ. ಈ ಬಗ್ಗೆ ಕ್ಯಾಬ್ ಚಾಲಕ ಅಹ್ಮದ್ ಶಫೀಕ್ ರವರು ನೀಡಿದ ದೂರಿನಂತೆ 10.10.2025 ರಂದು ಉರ್ವಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 103/2025 ಕಲಂ: 352, 353(2) ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ.

RELATED ARTICLES
- Advertisment -
Google search engine

Most Popular