Friday, December 19, 2025
Google search engine

Homeರಾಜ್ಯಸುದ್ದಿಜಾಲ ಸಮುದ್ರದ ಹೊಡೆತಕ್ಕೆ ಕೊಚ್ಚಿ ಹೋದ ಇಬ್ಬರು ಸಹೋದರರು

 ಸಮುದ್ರದ ಹೊಡೆತಕ್ಕೆ ಕೊಚ್ಚಿ ಹೋದ ಇಬ್ಬರು ಸಹೋದರರು

ಕಾರವಾರ: ಸಮುದ್ರದಲ್ಲಿ ಮುಳುಗಿ ಇಬ್ಬರು ಸಹೋದರರು ಸಾವಿಗೀಡಾದ ಘಟನೆ ಹೊನ್ನಾವರದ ಮಂಕಿಯಲ್ಲಿ ನಡೆದಿದೆ.

ಮೃತರನ್ನು ಮದನ್ ನಾರಾಯಣ ಖಾರ್ವಿ (17), ಸುಜನ್ ನಾರಾಯಣ ಖಾರ್ವಿ (15) ಎಂದು ಗುರುತಿಸಲಾಗಿದೆ. ಗುರುವಾರ (ಡಿ.18) ಕಬ್ಬಡ್ಡಿ ಆಡಿ, ನಂತರ ಇಬ್ಬರೂ ಸಂಜೆ ಸಮುದ್ರಕ್ಕೆ ಆಟ ಆಡಲು ಇಳಿದಿದ್ದರು. ಈ ವೇಳೆ ಅಲೆಗಳ ಹೊಡೆತಕ್ಕೆ ಇಬ್ಬರು ಕೊಚ್ಚಿ ಹೋಗಿದ್ದರು.

ತೀವ್ರ ಹುಡುಕಾಟದ ಬಳಿಕ ಗುರುವಾರ ತಡರಾತ್ರಿ ಇಬ್ಬರ ಶವಗಳು ಪತ್ತೆಯಾಗಿವೆ. ಮೃತದೇಹಗಳನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ. ಈ ಸಂಬಂಧ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

RELATED ARTICLES
- Advertisment -
Google search engine

Most Popular