Sunday, April 20, 2025
Google search engine

Homeಅಪರಾಧಇಬ್ಬರು ಮನೆಗಳ್ಳರ ಬಂಧನ: ಚಿನ್ನಾಭರಣ ವಶ

ಇಬ್ಬರು ಮನೆಗಳ್ಳರ ಬಂಧನ: ಚಿನ್ನಾಭರಣ ವಶ

ಮೈಸೂರು : ನಗರದ ಸಿಸಿಬಿ ಪೊಲೀಸರು ಇಬ್ಬರು ಮನೆಗಳ್ಳರನ್ನು ಬಂಧಿಸಿ
೨೬ ಲಕ್ಷ ರೂ ಮೌಲ್ಯದ ೪೧೬ ಗ್ರಾಂ ಚಿನ್ನಾಭರಣಗಳು ಮತ್ತು ೧ ಸುಜುಕಿ ಆಕ್ಸಿಸ್ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಕಳೆದ ವರ್ಷ ಡಿ.೨೮ ರಂದು ವಿಜಯನಗರ ಪೊಲೀಸ್ ಠಾಣೆಯಲ್ಲಿ ವರದಿಯಾಗಿದ್ದ ಕನ್ನ ಕಳುವು ಪ್ರಕರಣದ ಆರೋಪಿಗಳು ಮತ್ತು ಕಳುವಾದ ಮಾಲಿನ ಪತ್ತೆ ಸಂಬಂಧ ಸಿಸಿಬಿ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿಶೇಷ ತಂಡ ಜ.೧೭ ರಂದು ನಗರದ ಅಶೋಕ ರಸ್ತೆಯಲ್ಲಿ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು.

ಆತ ನೀಡಿದ ಮಾಹಿತಿ ಮೇರೆಗೆ ಮತ್ತೊಬ್ಬ ಆರೋಪಿಯನ್ನು ಫೆ,೧೦ ರಂದು ಮಂಡಿ ಮೊಹಲ್ಲದ ಮಿಷನ್ ಆಸ್ಪತ್ರೆಯ ವೃತ್ತದ ಬಳಿ ವಶಕ್ಕೆ ಪಡೆದು ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಿದಾಗ ಸ್ವತ್ತು ಕಳುವು ಪ್ರಕರಣ ಬೆಳಕಿಗೆ ಬಂದಿತು.

ಡಿಸಿಪಿ ಎಸ್. ಜಾಹ್ನವಿ, ಸಿಸಿಬಿ ಎಸಿಪಿ ಎಸ್.ಎನ್ಸಂ ದೇಶ್‌ಕುಮಾರ್ ಮಾರ್ಗದರ್ಶನದಲ್ಲಿ ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್ ಮೋಹನ್‌ಕುಮಾರ್ ಎಂ., ಪಿಎಸ್‌ಐ ಮಾರುತಿ ಅಂತರಗಟ್ಟಿ, ಕಿರಣ್ ಹಂಪಿಹೊಳಿ, ಎ.ಎಸ್.ಐ ಅಸ್ಕರ್ ಖಾನ್, ಜಗದೀಶ್
ಸಿಬ್ಬಂದಿಗಳಾದ ಸಂಪಾಷ, ರಾಮಸ್ವಾಮಿ, ಎಂ.ಆರ್ ಗಣೇಶ್, ಎ.ಉಮಾಮಹೇಶ್, ಲಕ್ಷ್ಮೀಕಾಂತ್, ಪ್ರಕಾಶ್, ಸುರೇಶ್, ಮೋಹನಾರಾಧ್ಯ, ಚಂದ್ರಶೇಖರ್, ಮಹೇಶ್, ನರಸಿಂಹರಾಜು, ಮಧುಸೂಧನ್, ಶಿವಣ್ಣ, ಗೋವಿಂದ ,ರವಿ ಕೆ.ಎಸ್. ಮಹೇಶ, ಮಮತ, ರಮ್ಯ ದಾಳಿಯಲ್ಲಿ ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular