ಮೈಸೂರು: ನಗರದ ಜಿಎಸ್ಎಸ್ಎಸ್ ಸಂಸ್ಥೆಯ ಸಿಂಹ ಸುಬ್ಬಲಕ್ಷ್ಮೀ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಿಕಾಂ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಭಾರತಿ ಇತ್ತಿಚ್ಚೇಗೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದ ಪ್ಯಾರ ಜೂನಿಯರ್ ರಾಷ್ಟೀಯ ಗೇಮ್ ನಲ್ಲಿ ಭಾಗವಹಿಸಿ, ಗುಂಡು ಎಸೆತಾ ಹಾಗೂ 100ಮೀ. ಓಟದ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕ ಮತ್ತು ಉದ್ದ ಜಿಗಿತ ಸ್ಪರ್ಧೆಯಲ್ಲಿ ಸಿಲ್ವರ್ ಪದಕವನ್ನು ಮುಡಿಗೆರಿಸಿಕೊಂಡು, ಡಿಸೆಂಬರ್ ತಿಂಗಳಲ್ಲಿ ನಡೆಯುವ ಪ್ಯಾರ ಜೂನಿಯರ್ ಏಷ್ಯಯನ್ ಗೇಮ್ಸ್ ಗೆ ಆಯ್ಕೆಯಾಗಿದ್ದಾರೆ.
ಕಾಲೇಜು ಆಡಳಿತ ಮಂಡಳಿಯಿಂದ, ಪ್ರಾಂಶುಪಾಲರು, ದೈಹಿಕ ಶಿಕ್ಷಣ ನಿರ್ದೇಶಕ ಕ್ರೀಡಾಪಟುಗೆ ಅಭಿನಂದನೆ ಸಲ್ಲಿಸಿದ್ದಾರೆ.