Thursday, April 3, 2025
Google search engine

Homeಆರೋಗ್ಯಮಹಾರಾಷ್ಟ್ರದಲ್ಲಿ ಇಬ್ಬರು ಜಿಬಿಎಸ್ ಸೋಂಕಿತರು ಮೃತ್ಯು : ದೇಶದಲ್ಲಿ ಸಾವಿನ ಸಂಖ್ಯೆ 14ಕ್ಕೇರಿಕೆ

ಮಹಾರಾಷ್ಟ್ರದಲ್ಲಿ ಇಬ್ಬರು ಜಿಬಿಎಸ್ ಸೋಂಕಿತರು ಮೃತ್ಯು : ದೇಶದಲ್ಲಿ ಸಾವಿನ ಸಂಖ್ಯೆ 14ಕ್ಕೇರಿಕೆ

ಕೊಲ್ಹಾಪುರ: ಮಹಾರಾಷ್ಟ್ರದಲ್ಲಿ ಶುಕ್ರವಾರ ಮತ್ತೆ ಇಬ್ಬರು ಜಿಬಿಎಸ್ ಸೋಂಕಿತರು ಮೃತಪಟ್ಟಿದ್ದು, ಜನವರಿಯಿಂದ ರಾಜ್ಯದಲ್ಲಿ ಈ ಸೋಂಕಿಗೆ ಬಲಿಯಾಗಿರುವವರ ಸಂಖ್ಯೆ 11ಕ್ಕೇರಿದೆ. ಅಸ್ಸಾಂ, ತಮಿಳುನಾಡು ಹಾಗೂ ಬಂಗಾಳದಲ್ಲಿ ತಲಾ ಒಬ್ಬರು ಸೋಂಕಿನಿಂದ ಮೃತಪಟ್ಟಿದ್ದು, ದೇಶದಲ್ಲಿ ಒಟ್ಟು 14 ಮಂದಿ ಈ ಸೋಂಕಿನಿಂದ ಜೀವ ಕಳೆದುಕೊಂಡಿದ್ದಾರೆ.

ಶುಕ್ರವಾರ ಕೊಲ್ಹಾಪುರ ಹಾಗೂ ನಾಗ್ಪುರ ನಗರಗಳಲ್ಲಿ ಮೊದಲ ಜಿಬಿಎಸ್ ಸಾವು ವರದಿಯಾಗಿದೆ. ನಾಗ್ಪುರದ ಪರ್ದಿಯಲ್ಲಿ 45 ವರ್ಷದ ವ್ಯಕ್ತಿ ಬಲಿಯಾಗಿದ್ದರೆ, ಕೊಲ್ಹಾಪುರದ ಚಂದಗಢದಲ್ಲಿ ಈ ಅಪರೂಪದ ಸೋಂಕಿನಿಂದ 60 ವರ್ಷದ ಮಹಿಳೆಯೊಬ್ಬರು ಅಸು ನೀಗಿದ್ದಾರೆ. ಇವೆರಡೂ ಜಿಬಿಎಸ್ ಪ್ರಕರಣಗಳು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ.

ಅರೋಗ್ಯ ಇಲಾಖೆ ಅಧಿಕಾರಿಗಳು ರಾಜ್ಯದಲ್ಲಿ ಜಿಬಿಎಸ್ ಪ್ರಕರಣಗಳನ್ನು ಯಶಸ್ವಿಯಾಗಿ ನಿಯಂತ್ರಿಸಿದ್ದಾರೆ. ಜನವರಿ 9ರಂದು ಪುಣೆಯಲ್ಲಿ ಸೋಂಕು ಉಲ್ಬಣಗೊಂಡ ಬಳಿಕ ಸೋಂಕಿತರ ಸಂಖ್ಯೆಯನ್ನು 200ರ ಮಿತಿಯಲ್ಲಿ ಇರಿಸಲು ಸಾಧ್ಯವಾಗಿದೆ ಎಂದು ಕೊಲ್ಹಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಪ್ರಕಾಶ್ ಅಬಿಟ್ಕರ್ ಹೇಳಿದ್ದಾರೆ. ಕಡಿಮೆ ರೋಗನಿರೋಧಕ ಶಕ್ತಿಯನ್ನು ಹೊಂದಿರುವ ವ್ಯಕ್ತಿಗಳು ಈ ಸೋಂಕಿಗೆ ಬಲಿಯಾಗುವ ಸಾಧ್ಯತೆ ಅಧಿಕ ಎಂದು ಅವರು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular