Friday, April 4, 2025
Google search engine

Homeಅಪರಾಧಪ್ರಯಾಗ್ ರಾಜ್ ನಿಂದ ಬರುವಾಗ ರಸ್ತೆ ಅಪಘಾತದಲ್ಲಿ ಮೈಸೂರಿನ ಇಬ್ಬರು ಯುವಕರ ದುರ್ಮರಣ

ಪ್ರಯಾಗ್ ರಾಜ್ ನಿಂದ ಬರುವಾಗ ರಸ್ತೆ ಅಪಘಾತದಲ್ಲಿ ಮೈಸೂರಿನ ಇಬ್ಬರು ಯುವಕರ ದುರ್ಮರಣ

ಮೈಸೂರು: ಪ್ರಯಾಗ್ ರಾಜ್ ಮಹಾ ಕುಂಭಮೇಳ ಮುಗಿಸಿ ಬರುವಾಗ ರಸ್ತೆ ಅಪಘಾತದಲ್ಲಿ ಮೈಸೂರಿನ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ನಡೆದಿದೆ.

ರಾಮಕೃಷ್ಣ ಶರ್ಮ , ಅರುಣ್ ಶಾಸ್ತ್ರಿ ಮೃತಪಟ್ಟವರು. ಪ್ರಯಾಗರಾಜ್ ಮುಗಿಸಿಕೊಂಡು ಕಾಶಿಗೆ ಬರುವಾಗ ಮಿರ್ಜಾಪುರದ ಬಳಿ ಲಾರಿ ಮತ್ತು ರಾಮಕೃಷ್ಣ ಶರ್ಮ , ಅರುಣ್ ಶಾಸ್ತ್ರಿ ಅವರಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದೆ. ತಲೆಗೆ ತೀವ್ರವಾದ ಪೆಟ್ಟು ಬಿದ್ದು ಇಬ್ಬರನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು

ರಾಮಕೃಷ್ಣ ಶರ್ಮ(31) ಕೆ ಆರ್ ಎಸ್ ಹಿನ್ನೀರಿನ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿದ್ದರು. ಅವರಿಗೆ ಮದುವೆ ಆಗಿರಲಿಲ್ಲ , ತಂದೆ – ತಾಯಿಗೆ ಒಬ್ಬರೇ ಮಗ. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಬೆಳಗ್ಗೆ 8.32ರಂದಯ ಕೊನೆಯುಸಿರೆಳೆದಿದ್ದಾರೆ

ಅರುಣ್ ಶಾಸ್ತ್ರಿ(38) ಪುರೋಹಿತರಾಗಿ ಕೆಲಸ ಮಾಡುತ್ತಿದ್ದರು. ಇವರಿಗೂ ಮದುವೆ ಆಗಿರಲಿಲ್ಲ. ಇವರು ಕೂಡ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ 3 ಗಂಟೆ ಸಮಯದಲ್ಲಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

RELATED ARTICLES
- Advertisment -
Google search engine

Most Popular