Friday, April 4, 2025
Google search engine

Homeಅಪರಾಧಉದಯಗಿರಿ ಠಾಣೆ ಮೇಲೆ ದಾಳಿ ಕೇಸ್ : ಡಿಸಿಪಿ ಕಾರಿನ ಮೇಲೆ ಕಲ್ಲೆಸೆದಿದ್ದ ನಾಲ್ವರು ಬಂಧನ,...

ಉದಯಗಿರಿ ಠಾಣೆ ಮೇಲೆ ದಾಳಿ ಕೇಸ್ : ಡಿಸಿಪಿ ಕಾರಿನ ಮೇಲೆ ಕಲ್ಲೆಸೆದಿದ್ದ ನಾಲ್ವರು ಬಂಧನ, ಬಂಧಿತರ ಸಂಖ್ಯೆ 20ಕ್ಕೆ ಏರಿಕೆ

ಮೈಸೂರು : ಮೈಸೂರಿನಲ್ಲಿ ಉದಯಗಿರಿ ಠಾಣೆಯ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿಸಿಪಿ ಕಾರಿನ ಮೇಲೆ ಕಲ್ಲು ಎಸೆದಿದ್ದ ನಾಲ್ವರನ್ನು ಇದೀಗ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಹೀಗಾಗಿ ಈ ಒಂದು ಪ್ರಕರಣದಲ್ಲಿ ಬಂದಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

ಮೈಸೂರಿನ ಉದಯಗಿರಿ ಠಾಣೆಯ ಮೇಲೆ ಕಲ್ಲು ತೂರಾಟ ಪ್ರಕರಣ ಸಂಬಂಧ ಡಿಸಿಪಿ ಜಾಹ್ನವಿ ಕಾರಿಗೆ ಕಲ್ಲೆಸೆದ ನಾಲ್ವರು ಆರೋಪಿಗಗಳು ಇದೀಗ ಅರೆಸ್ಟ್ ಆಗಿದ್ದಾರೆ. ಘಟನೆ ಕುರಿತು ಸಿಸಿಟಿವಿ ಹಾಗೂ ಮೊಬೈಲ್ ವಿಡಿಯೋ ಅನ್ನು ಆಧರಿಸಿ ನಾಲ್ವರು ಆರೋಪಿಗಳನ್ನ ಬಂಧಿಸಲಾಗಿದ್ದು, ಬಂಧಿತ ಆರೋಪಿಗಳ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಇನ್ನಷ್ಟು ಆರೋಪಿಗಳು ಬಂಧನಕ್ಕೆ ಸಿಸಿಬಿ ಅಧಿಕಾರಿಗಳು ಬಲೆ ಬೀಸಿದ್ದಾರೆ.

ಈ ಒಂದು ಗಲಾಟೆಗೆ ಕಾರಣನಾಗಿದ್ದ ಮುಸ್ಲಿಂ ಮುಖಂಡ ಮುಸ್ತಾಕ್ ಪ್ರಚೋದನಕಾರಿ ಭಾಷಣ ಮಾಡಿದ್ದ ಇದರಿಂದಲೇ ಈ ಒಂದು ಗಲಾಟೆ ನಡೆದಿದ್ದು ಸದ್ಯ ಮುಸ್ಲಿಂ ಮುಖಂಡ ಮುಸ್ತಾಕ್ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಪ್ರಕರಣದಲ್ಲಿ ಬಂಧಿತರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ವಿಧಿಸಿ ಕೋರ್ಟ್ ಆದೇಶ ನೀಡಿದೆ.

RELATED ARTICLES
- Advertisment -
Google search engine

Most Popular