Thursday, September 25, 2025
Google search engine

Homeರಾಜ್ಯಯುಎಚ್‌ಐಡಿ ಸ್ಟಿಕ್ಕರ್ ಅಂಟಿಸುವ ಪ್ರಕ್ರಿಯೆ ಪ್ರಾರಂಭ : ಗ್ರಾಹಕರಿಗೆ ವಿದ್ಯುತ್ ಬಿಲ್ಲಿಂಗ್‌ನಲ್ಲಿ ಬದಲಾವಣೆ

ಯುಎಚ್‌ಐಡಿ ಸ್ಟಿಕ್ಕರ್ ಅಂಟಿಸುವ ಪ್ರಕ್ರಿಯೆ ಪ್ರಾರಂಭ : ಗ್ರಾಹಕರಿಗೆ ವಿದ್ಯುತ್ ಬಿಲ್ಲಿಂಗ್‌ನಲ್ಲಿ ಬದಲಾವಣೆ

ಬೆಂಗಳೂರು  : ರಾಜ್ಯಾದ್ಯಂತ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆರಂಭವಾಗಿದ್ದು, ಸಮೀಕ್ಷೆಗೂ ಮುನ್ನ ಮನೆ ಗುರುತಿಸಿ ಪಟ್ಟಿ ಮಾಡುವ ಕೆಲಸದಲ್ಲಿ ಬೆಸ್ಕಾಂ ಮೀಟರ್‌ ರೀಡರ್‌ಗಳು ತಲ್ಲೀನರಾಗಿದ್ದು, ಆಗಸ್ಟ್ ನಲ್ಲಿ ತಡವಾಗಿ ಮೀಟರ್ ರೀಡಿಂಗ್ ನಡೆದ ಪರಿಣಾಮ ಬಿಲ್‌ ನಲ್ಲಿ ವಿದ್ಯುತ್‌ ಬಳಕೆ ಹೆಚ್ಚಾಗಿ ಹಲವು ಗ್ರಾಹಕರಿಗೆ ಪೂರ್ಣ ಮೊತ್ತ ಭರಿಸುವಂತಾಗಿದೆ.

ಪ್ರತಿ ತಿಂಗಳು ವಿದ್ಯುತ್ ಮೀಟ‌ರ್ ರೀಡರ್‌ಗಳು ನಿಗದಿತ ದಿನಾಂಕದಿಂದ ನಿಗದಿತ ದಿನಾಂಕದವರೆಗೆ ಬಳಕೆಯಾಗಿರುವ ವಿದ್ಯುತ್ ಯುನಿಟ್ ಸಂಖ್ಯೆ ಆಧರಿಸಿ ಮೀಟರ್ ರೀಡ್ ಮಾಡುತ್ತಿದ್ದರು. ಆದರೆ ಆಗಸ್ಟ್ ನಲ್ಲಿ ಬೆಸ್ಕಾಂ ಮೀಟರ್ ರೀಡರ್ ಗಳಿಗೆ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ- ಶೈಕ್ಷಣಿಕ ಸಮೀಕ್ಷೆಗೆ ಮನೆ ಆಯ್ಕೆ ಮಾಡಿರುವ ಕುರಿತು ‘ಯುಎಚ್‌ಐಡಿ’ ಸ್ಟಿಕ್ಕರ್ ಅಂಟಿಸುವ ಜವಾಬ್ದಾರಿ ನೀಡಿತ್ತು.

ರಾಜ್ಯದಲ್ಲಿ ಎಲ್ಲಾ ಮೀಟರ್ ರೀಡರ್ ಗಳು ಸ್ಟಿಕ್ಕರ್ ಅಂಟಿಸುವ ಕೆಲಸದಲ್ಲಿದ್ದರು. ಮೀಟ‌ರ್ ರೀಡಿಂಗ್‌ ಗೆ ತಡವಾಗಿ ಹೋಗಿದ್ದರು, 30 ದಿನಗಳ ಬಳಕೆಯನ್ನು ಪರಿಗಣಿಸಿ ಬಿಲ್ ಜನರೇಟ್ ಮಾಡದೆ 35-40 ದಿನಗಳ ಬಳಕೆಯನ್ನು ಬಿಲ್ ಮಾಡಿದ್ದಾರೆ. ಹೀಗಾಗಿ ಮಾಸಿಕ 200 ಯುನಿಟ್‌ ಗಿಂತ ಬಳಕೆ ಹೆಚ್ಚಾ ಗಿ ಬಳಕೆ ಮಾಡಿದ್ದರಿಂದ ಪ್ರತಿ ತಿಂಗಳು ಗೃಹ ಜ್ಯೋತಿ ಫಲಾನುಭವಿ ಆಗುತ್ತಿದ್ದ ಇದೀಗ ಪೂರ್ಣ ಮೊತ್ತದ ವಿದ್ಯುತ್ ಬಿಲ್ ಪಾವತಿಸುವಂತಾಗಿದೆ ಎನ್ನಲಾಗಿದೆ.

RELATED ARTICLES
- Advertisment -
Google search engine

Most Popular