Tuesday, May 21, 2024
Google search engine

Homeರಾಜ್ಯಸುದ್ದಿಜಾಲಚುನಾವಣೆಯಲ್ಲಿ ಅಪಪ್ರಚಾರ ಬೇಡ ಎಂದು ಬಾಡಿಗೆದಾರರ ಬಳಗದ ಅಧ್ಯಕ್ಷ ಉಮೇಶ್ ಮನವಿ

ಚುನಾವಣೆಯಲ್ಲಿ ಅಪಪ್ರಚಾರ ಬೇಡ ಎಂದು ಬಾಡಿಗೆದಾರರ ಬಳಗದ ಅಧ್ಯಕ್ಷ ಉಮೇಶ್ ಮನವಿ

ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಲೋಕಸಭೆ ಚುನಾವಣಾ ಪ್ರಚಾರದಲ್ಲಿ ಮಾಜಿ ಸಚಿವ ಸಾ.ರಾ ಮಹೇಶ್ ಮಳಿಗೆಗಳ ಬಾಡಿಗೆದಾರರಿಂದ ಕೋಟ್ಯಂತರ ರೂಗಳನ್ನು ಶಾಸಕ ಡಿ. ರವಿಶಂಕರ್ ಪಡೆದಿದ್ದಾರೆ ಎಂದು ಮಾಡಿರುವ ಆರೋಪ ಸುಳ್ಳು ಮಾಜಿ ಸಚಿವರಿಗೆ ಯಾರೋ ತಪ್ಪು ಸಂದೇಶವನ್ನು ರವಾನಿಸಿದ್ದಾರೆ ಅಂಗಡಿ ನಡೆಸಿ ಜೀವನ ಸಾಗಿಸುವ ನಮ್ಮಲ್ಲಿ ಕೋಟಿಗಟ್ಟಲೆ ಹಣ ಎಲ್ಲಿಂದ ಬಂದಿದೆ ಮುಂದೆ ಈ ರೀತಿ ಪ್ರಚಾರ ಮಾಡಬೇಡಿ ಎಂದು ಮಾಜಿ ಸಚಿವ ಸಾ.ರಾ ಮಹೇಶ್ ಅವರಲ್ಲಿ ಮನವಿ ಮಾಡುತ್ತಿದ್ದೇವೆ ಎಂದು ಮಳೆಗೆಗಳ ಬಾಡಿಗೆದಾರರ ಬಳಗದ ಅಧ್ಯಕ್ಷ ಉಮೇಶ್ ಮನವಿ ಮಾಡಿದರು ಕೆ.ಆರ್.ನಗರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಾಸ್ತವವಾಗಿ ೭೧ ಕುಟುಂಬಗಳು ಹಾಗೂ ೧೫೦ ಕಾರ್ಮಿಕ ವರ್ಗದವರು ಅಂಗಡಿಗಳಿಲ್ಲದೆ ಬೀದಿ ಪಾಲಾಗಿದ್ದು ಜೀವನ ನಡೆಸಲು ಕಷ್ಟವಾಗಿರುತ್ತದೆ ಸಾರ್ವಜನಿಕರೇ ಕಂಡಿರುವಂತೆ ಅಂಗಡಿಗಳ ಮುಂಭಾಗ ಅಂಗಡಿಗಳ ಮಾಲೀಕರೇ ಬೀದಿ ಬದಿ ವ್ಯಾಪಾರ ಮಾಡಿ ಅಲ್ಪಸ್ವಲ್ಪ ಆದಾಯದಿಂದ ಜೀವನ ಸಾಗಿಸುತ್ತಿದ್ದಾರೆ ಆದರೆ ನಮಗೆ ಕೊಡಲು ಕೋಟಿಗಟ್ಟಲೆ ಹಣ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು.

ಹಿಂದಿನಿಂದ ಹಿಂದಿನವರೆಗೂ ಆಡಳಿತದಲ್ಲಿ ಇದ್ದಂತಹ ವಿಧಾನಸಭಾ ಸದಸ್ಯರುಗಳು ಹಾಗೂ ಪುರಸಭಾ ಸದಸ್ಯರುಗಳು ಎಲ್ಲರೂ ಸಹ ಬಾಡಿಗೆದಾರರಿಗೆ ಆಯಾಯ ಸಂದರ್ಭದಲ್ಲಿ ಎಲ್ಲಾ ರೀತಿಯ ಸಹಕಾರ ನೀಡಿ ನವೀಕರಣ ಮಾಡಿಸಿ ಕೊಟ್ಟು ಜೀವನಕ್ಕೆ ದಾರಿ ಮಾಡಿ ಕೊಟ್ಟಿರುತ್ತಾರೆ ಅದೇ ರೀತಿ ಈ ಬಾರಿಯೂ ಕೂಡ ಶಾಸಕ ಡಿ ರವಿಶಂಕರ್ ಮತ್ತು ಪುರಸಭಾ ಸದಸ್ಯರುಗಳು ನಮ್ಮ ೭೧ ಕುಟುಂಬಗಳ ಹೊಟ್ಟೆಯ ಮೇಲೆ ಹೊಡೆಯಬಾರದೆಂಬ ಉದ್ದೇಶದಿಂದ ನಮಗೆ ಮಳೆಗೆಗಳನ್ನು ನವೀಕರಣ ಮಾಡಲು ಸಹಾಯ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ತಾಲೂಕಿನ ಹಾಲಿ ಶಾಸಕರು ಮಾಜಿ ಸಚಿವರು ಎರಡು ಕಣ್ಣುಗಳಂತೆ ಇಬ್ಬರೂ ಒಂದುಗೂಡಿ ನಮ್ಮ ಸಮಸ್ಯೆಯನ್ನು ಬಗೆಹರಿಸಿ ಜೀವನಕ್ಕೆ ದಾರಿ ಮಾಡಿಕೊಡಬೇಕೆಂದು ಮನವಿ ಮಾಡಿದ ಅಧ್ಯಕ್ಷರು ಇದರದಲ್ಲಿ ಯಾವುದೇ ರೀತಿಯ ತಪ್ಪು ಗ್ರಹಿಕೆ ಬೇಡ ಬಡವರ ಪರ ಸದಾ ಇರುವ ಇಬ್ಬರು ನಮ್ಮ ಮನವಿಯನ್ನು ಪರಿಗಣಿಸಿ ಎಂದು ಮನವಿ ಮಾಡಿದರು.

ಅಂಗಡಿಗಳ ದೀರ್ಘಕಾಲ ಬಾಗಿಲು ಹಾಕಿದರೆ ಮಳಿಗೆಗಳ ಒಳಗಡೆ ಇರುವ ಮಾರಾಟದ ವಸ್ತುಗಳು ಅಂದರೆ ಮೆಡಿಕಲ್ಸ್ ಪಾದ ರಕ್ಷೆಗಳು ರೆಡಿಮೇಡ್ ಬಟ್ಟೆಗಳು ಬೇಕರಿ ಪದಾರ್ಥಗಳು ಸ್ಟೇಷನರಿ ಪುಸ್ತಕದ ಅಂಗಡಿ ಇತ್ಯಾದಿ ವಸ್ತು ಹಾನಿಗೊಳಗಾಗುತ್ತದೆ ಆಗ ನಮಗೆ ತುಂಬಾ ಹಾನಿಯಾಗಿ ನಷ್ಟ ಉಂಟಾಗಿ ಜೀವನ ಸಾಗಿಸಲು ಕಷ್ಟವಾಗುತ್ತದೆ ಮತ್ತು ಬೇಸಿಗೆಯ ಉರಿ ಬಿಸಿಲಿನಲ್ಲಿ ಜಗಲಿಗಳ ಮೇಲೆ ವ್ಯಾಪಾರ ಮಾಡಿ ಜೀವನ ಸಾಗಿಸುವ ಕಾರ್ಮಿಕರ ಸ್ಥಿತಿ ತುಂಬಾ ವಿಷಾದನೀಯವಾಗಿದೆ ದಯಮಾಡಿ ನಮ್ಮ ಕಷ್ಟಕ್ಕೆ ಸ್ಪಂದಿಸಿ ಎಂದು ಕೈಮುಗಿದು ಮನವಿ ಮಾಡಿದರು.

ಈಗಲಾದರೂ ಈ ಸಮಸ್ಯೆಯನ್ನು ಲಘುವಾಗಿ ತೆಗೆದುಕೊಳ್ಳದೆ ಗಂಭೀರವಾಗಿ ಪರಿಗಣಿಸಿ ಸರ್ಕಾರದ ಮಟ್ಟದಲ್ಲಿ ಪುರಸಭೆಯ ಚುನಾಯಿತ ಪ್ರತಿನಿಧಿಗಳು ಪುರಸಭಾ ಅಧಿಕಾರಿಗಳು ಹಾಲಿ ಶಾಸಕರು ಮಾಜಿ ಸಚಿವರು ಹಾಗೂ ಸಾರ್ವಜನಿಕರು ಒಂದುಗೂಡಿ ನಮ್ಮ ಸಮಸ್ಯೆಯನ್ನು ಬಗೆಹರಿಸುವ ಜೊತೆಗೆ ನಮ್ಮಗಳ ಕಷ್ಟಕ್ಕೆ ಸ್ಪಂದಿಸಬೇಕೆಂದು ಮನವಿ ಮಾಡಿಕೊಳ್ಳುತ್ತಾ ಸಾರ್ವಜನಿಕರಲ್ಲಿ ಅರಿವಿಲ್ಲದೆ ಕೆಲವು ಜನಗಳು ಕೋಟ್ಯಾಂತರ ರೂಪಾಯಿ ಹಣಕಾಸಿನ ಬಗ್ಗೆ ಲಘುವಾಗಿ ಮಾತನಾಡಿರುವುದಕ್ಕೆ ತೀವ್ರವಾಗಿ ವಿಸಾದಿಸುತ್ತ ನೊಂದಿರುವ ನಮ್ಮನ್ನು ಮತ್ತೆ ಹೆಚ್ಚು ನೋವು ಕೊಡದಿರಿ ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಬಳಗದ ಸಂಚಾಲಕ ಕಾಮಧೇನು ಧರ್ಮ ಮಹಾದೇವ ಎಲ್ ಜಾವಿದ್ ಅಲಿ ಮಹದೇವ ಎಸ್ ನಾಗೇಂದ್ರ ಕೆ ಪಿ ಅನ್ವರ್ ಕೆ ಟಿ ರಮೇಶ್ ಗಂಗಾಧರ ರಾಜ್ ಸೇರಿದಂತೆ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular