Tuesday, April 22, 2025
Google search engine

Homeರಾಜ್ಯಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿರನ್ನು ಆಯ್ಕೆ ಮಾಡುವಂತೆ ಉಮೇಶ್ ಒತ್ತಾಯ

ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿರನ್ನು ಆಯ್ಕೆ ಮಾಡುವಂತೆ ಉಮೇಶ್ ಒತ್ತಾಯ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ:  ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರನ್ನು ಆಯ್ಕೆ ಮಾಡುವಂತೆ ಕೆ‌.ಆರ್.ನಗರ ಪಟ್ಟಣದ ಪುರಸಭಾ ಸದಸ್ಯ ಉಮೇಶ್ ಜೆಡಿಎಸ್ ವರಿಷ್ಠರನ್ನು ಒತ್ತಾಯ ಮಾಡಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಾಗಿದೆ ಆದ್ದರಿಂದ ಒಕ್ಕೊರಲಿನಿಂದ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದರೆ ಈ ಬಾರಿ ಅಧಿಕ ಅಂತರದ ಮತಗಳಿಂದ ಗೆಲುವು ಸಾದಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ಬಾರಿಯು ಕೂಡ ದೇಶದಲ್ಲಿ ಮತ್ತೊಮ್ಮೆ ಪ್ರಧಾನಿ ನರೇಂದ್ರಮೊದಿ ಅವರು  ಪ್ರಧಾನಿಯಾಗಿ ಅಧಿಕಾರ ನಡೆಸಲಿದ್ದಾರೆ, ಮೊದಿ ಬೆಂಬಂಲಿಸಿ ಹಿಂದುಳಿ ವರ್ಗಗಳು ಮತ ನೀಡಲಿದ್ದಾರೆ ಎಂದು ತಿಳಿಸಿದರು.

ಮೈಸೂರು ಮಹರಾಜರಾದ ಯದುವೀರ್ ಒಡೆಯರ್ ಅವರನ್ನು ಗುರುತಿಸಿ ಬಿಜೆಪಿ‌ ಪಕ್ಷ  ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದು ಸ್ವಾಗತಾರ್ಹ.ಮೈಸೂರು ಮಹರಾಜರು ಕೊಡಗು ಮತ್ತು ಮೈಸೂರು ಜಿಲ್ಲೆಯ ಜನರಿಗೆ ಅನ್ನ, ನೀರು,‌ನೆರಳು‌ ನೀಡಿರುವವರು.ಅಂದೇ ಪ್ರಜೆಗಳಿಗಾಗಿ ಸಾಲ ಮಾಡಿ ಅಣೆಕಟ್ಟು ಕಟ್ಟಿದವರು, ಶಾಲೆ ,ಆಸ್ಪತ್ರೆ ತೆರದವರು, ನಾಲೆಗಳನ್ನು ನಿರ್ಮಿಸಿ ಅನ್ನದಾತರಿಗೆ ಭೂಮಿ ಕೊಟ್ಟವರು, ಇತಹವನ್ನು ನಮ್ಮ‌ಪಕ್ಷ ನಾಯಕರಾದ ಮಾಜಿ ಸಚಿವ ಸಾ.ರಾ.ಮಹೇಶ್ ಅವರ ಮುಂದಾಳತ್ವದಲ್ಲಿ  ಅಧಿಕ ಮತಗಳಿಂದ ಗೆಲಿಸುತ್ತೇವೆ ಎಂದು ನುಡಿದಿದ್ದಾರೆ.

RELATED ARTICLES
- Advertisment -
Google search engine

Most Popular