ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ತಾಲೂಕಿನ ಗಂಧನಹಳ್ಳಿ ಗ್ರಾಮದ ರೈತನೋರ್ವ ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗ್ರಾಮದ ನಾಗರಾಜ್(೪೨) ಆತ್ಮಹತ್ಯೆ ಮಾಡಿಕೊಂಡವರಾಗಿದ್ದು, ಇವರಿಗೆ ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ.
ಕೃಷಿ ಚಟುವಟಿಕೆಗಾಗಿ ಹಾಗೂ ಕುಟುಂಬ ನಿರ್ವಹಣೆಗಾಗಿ ೫ ರಿಂದ ೬ ಲಕ್ಷ ರೂ ಕೈ ಸಾಲ ಮಾಡಿದ್ದಾರೆ ಇದರ ಜತೆಗೆ ಚಿಕ್ಕವಡ್ಡರಗುಡಿ ವಿಎಸ್‌ಎಸ್‌ಎನ್‌ನಲ್ಲಿ ಜಮೀನಿನ ಮೇಲೆ ೧.೨೦ ಲಕ್ಷ ಸಾಲ ಪಡೆದಿದ್ದ ನಾಗರಾಜ್ ಆ.೨ ರಂದು ಕ್ರಿಮಿನಾಶ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಸಂಬoಧಿಕರು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದ ಕಾರಣ ಸಂಜೆ ೬ ಗಂಟೆಗೆ ಮೃತಪಟ್ಟಿದ್ದಾರೆ. ಆ.೩ರ ಶನಿವಾರ ಮೃತರ ಸ್ವ-ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಈ ಸಂಬoಧ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.