Friday, April 18, 2025
Google search engine

Homeರಾಜ್ಯಅರಣ್ಯ ಇಲಾಖೆ ಅಧಿಕಾರಿಗಳಿಂದ ಅನಧಿಕೃತ ಶೆಡ್ ತೆರವು ಕಾರ್ಯಾಚರಣೆ

ಅರಣ್ಯ ಇಲಾಖೆ ಅಧಿಕಾರಿಗಳಿಂದ ಅನಧಿಕೃತ ಶೆಡ್ ತೆರವು ಕಾರ್ಯಾಚರಣೆ

ರಬಕವಿ-ಬನಹಟ್ಟಿ : ಬನಹಟ್ಟಿಯ ಸರ್ವೆ ನಂ. 7 ರಲ್ಲಿ ಅನಧಿಕೃತವಾಗಿ ಅರಣ್ಯ ಇಲಾಖೆಯ ಜಾಗದಲ್ಲಿ ನಿರ್ಮಿಸಿ ಕೊಂಡಿದ್ದ ಶೆಡ್ ಗಳ ತೆರವು ಕಾರ್ಯಾಚರಣೆ ಗುರುವಾರ ಬೆಳ್ಳಂಬೆಳಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ನಡೆಯಿತು.

ಬನಹಟ್ಟಿಯ ಸರ್ವೆ ನಂ. 7 ಗುಂಡಯ್ಯನ ಮಠದ ಹತ್ತಿರ ವಿರುವ ಅರಣ್ಯ ಇಲಾಖೆಯ ಜಾಗದಲ್ಲಿ ಅನಧಿಕೃತವಾಗಿ ಹಾಕಿದ್ದ ಶೆಡ್ ಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಕಳೆದ ತಿಂಗಳು ನೋಟಿಸ್ ನೀಡಿತ್ತು. ಆದರೆ ಅದಕ್ಕೆ ಸ್ಪಂದಿಸದ ಹಿನ್ನಲೆಯಲ್ಲಿ ಇಂದು ಗುರುವಾರ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ನಗರಸಭೆ, ಭೂಮಾಪನಾ ಇಲಾಖೆ ಇವರ ಸಮ್ಮುಖದಲ್ಲಿ ತೆರವುಗೊಳಿಸಲಾಯಿತು. ನಂತರ ಅಲ್ಲಿ ಅರಣ್ಯ ಇಲಾಖೆಯ ವತಿಯಿಂದ ನೂರಾರು ಗಿಡಗಳನ್ನು ನೆಡಲಾಯಿತು.

ಜಮಖಂಡಿ ವಲಯ ಅರಣ್ಯ ಅಧಿಕಾರಿ ಪವನ ಕುರನಿಂಗ, ಎಸಿಎಪ್ ಅಮೃತ ಗುಂಡೋಸಿ , ಉಪವಲಯ ಅರಣ್ಯಾಧಿಕಾರಿ ಮಲ್ಲು ನಾವ್ಹಿ, ರಬಕವಿ-ಬನಹಟ್ಟಿ ಪ್ರಭಾರ ತಹಶೀಲ್ದಾರ ವಿಜಯಕುಮಾರ ಕಡಕೋಳ, ಡಿವೈ ಎಸ್ಪಿ ಈ. ಶಾಂತವೀರ, ಬನಹಟ್ಟಿ ಸಿಪಿಐ ಸಂಜೀವ ಬಳಗಾರ, ಜಮಖಂಡಿ ಸಿಪಿಐ ಮಲ್ಲಪ್ಪ ಮಡ್ಡಿ, ಬನಹಟ್ಟಿ ಪಿಎಸ್ಐ ಶಾಂತಾ ಹಳ್ಳಿ, ವಿಜಯ ಕಾಂಬಳೆ, ತೇರದಾಳ ಪಿಎಸ್ಐ ಅಪ್ಪಣ್ಣ ಐಗಳಿ, ಪುರಂದರ ಪೂಜಾರಿ, ಲೋಕಾಪೂರ ಪಿಎಸ್ಐ ಕಾಡು ಜಕ್ಕನ್ನವರ, ಮಹಾಲಿಂಗಪುರ ಪಿಎಸ್ಐ ಕಿರಣ ಸತ್ತಿಗೇರಿ, ಕಂದಾಯ ನೀರಿಕ್ಷಕರಾದ ಪ್ರಕಾಶ ಮಠಪತಿ, ತಾಲೂಕು ಭೂಮಾಪಕರು ಏಕನಾಥ ಮುಂಡಾಸ, ಗ್ರಾಮ ಆಡಳಿತಾಧಿಕಾರಿ ಸದಾಶಿವ ಕುಂಬಾರ ವಲಯ ಬೀಳಗಿ, ಮುಧೋಳ, ಜಮಖಂಡಿ ಅರಣ್ಯ ಹಾಗೂ ಪೊಲೀಸ್ ಅಧಿಕಾರಿಗಳು ಇದ್ದರು.

RELATED ARTICLES
- Advertisment -
Google search engine

Most Popular