ಚಿಂತಾಮಣಿ : ಸುಮಾರು ೩೫ ವರ್ಷ ಪ್ರಾಯದ ಅಪರಿಚಿತ ಯುವಕನೊಬ್ಬನಿಗೆ ವಾಹನ ಡಿಕ್ಕಿ ಹೊಡೆದು ಆತ ಸಾವನ್ನಪ್ಪಿದ್ದಾನೆ.
ತಾಲೂಕಿನ ತಿನಕಲ್ ಗ್ರಾಮದ ಬಳಿ ಘಟನೆ ನಡೆದಿದ್ದು, ಯಾವುದೋ ದ್ವಿಚಕ್ರ ವಾಹನ ಪಾದಾಚಾರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ ಎನ್ನಲಾಗಿದೆ. ಪಾದಾಚಾರಿಯ ಹೆಸರು ವಿಳಾಸ ತಿಳಿದವರು ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಕೋರಲಾಗಿದೆ.