Friday, April 4, 2025
Google search engine

HomeUncategorizedರಾಷ್ಟ್ರೀಯದೆಹಲಿಯಲ್ಲಿ ಸುಧಾರಣೆಯಾಗದ ಗಾಳಿ ಗುಣಮಟ್ಟ: ‘ಅಪಾಯದ ಸ್ಥಿತಿ’ ಮುಂದುವರಿಕೆ

ದೆಹಲಿಯಲ್ಲಿ ಸುಧಾರಣೆಯಾಗದ ಗಾಳಿ ಗುಣಮಟ್ಟ: ‘ಅಪಾಯದ ಸ್ಥಿತಿ’ ಮುಂದುವರಿಕೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟದಲ್ಲಿ ಸುಧಾರಣೆಯಾಗುತ್ತಿಲ್ಲ ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಮತ್ತೆ ಆತಂಕ ಶುರುವಾಗಿದೆ.

ಶನಿವಾರ ಬೆಳಿಗ್ಗೆ ಸೂಚ್ಯಂಕವು (ಎಕ್ಯೂಐ) 351ಕ್ಕೆ ತಲುಪಿದ್ದು, ‘ಅಪಾಯದ ಸ್ಥಿತಿ’ ಮುಂದುವರಿದಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಮಾಹಿತಿ ನೀಡಿದೆ. ಕಳೆದ ಎರಡು ವಾರಗಳಿಂದ ವಾಯು ಗುಣಮಟ್ಟ ತೀವ್ರ ಅಪಾಯಕಾರಿ ಹಂತಕ್ಕೆ ಕುಸಿದಿದೆ. ಆದಾಗ್ಯೂ ದೆಹಲಿ ಸರ್ಕಾರ ವಾಯು ಗುಣಮಟ್ಟ ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

ಎಕ್ಯೂಐ ಪ್ರಮಾಣ

ಎಕ್ಯೂಐ ಪ್ರಮಾಣ ಸೊನ್ನೆಯಿಂದ 50 ರಷ್ಟಿದ್ದರೆ ‘ಉತ್ತಮ’ ಎಂದು, 51ರಿಂದ 100 ರಷ್ಟಿದ್ದರೆ ‘ಸಮಾಧಾನಕರ’, 101 ರಿಂದ 200 ರಷ್ಟಿದ್ದರೆ ‘ಸಾಧಾರಣ’, 201 ರಿಂದ 300 ರಷ್ಟಿದ್ದರೆ ‘ಕಳಪೆ’ ಹಾಗೂ 301 ರಿಂದ 400 ರಷ್ಟಿದ್ದರೆ ‘ಅತ್ಯಂತ ಕಳಪೆ’ ಎಂದು ಹೇಳಲಾಗುತ್ತದೆ. 401ರಿಂದ 450ರಷ್ಟು ಕಂಡು ಬಂದರೆ ‘ತೀವ್ರ ಕಳಪೆ’ ಹಾಗೂ 450ಕ್ಕಿಂತ ಹೆಚ್ಚಾದರೆ ‘ತೀವ್ರಕ್ಕಿಂತಲೂ ಅಪಾಯಕಾರಿ’ ಎಂದು ಪರಿಗಣಿಸಲಾಗುತ್ತದೆ.

RELATED ARTICLES
- Advertisment -
Google search engine

Most Popular