Saturday, April 19, 2025
Google search engine

HomeUncategorizedರಾಷ್ಟ್ರೀಯಕೇಂದ್ರ ಬಜೆಟ್ ೨೦೨೪: ಕಾಂಗ್ರೆಸ್ ಪ್ರಣಾಳಿಕೆಯನ್ನು ನಕಲು ಮಾಡಿದೆ: ವಿಪಕ್ಷಗಳ ಟೀಕೆ

ಕೇಂದ್ರ ಬಜೆಟ್ ೨೦೨೪: ಕಾಂಗ್ರೆಸ್ ಪ್ರಣಾಳಿಕೆಯನ್ನು ನಕಲು ಮಾಡಿದೆ: ವಿಪಕ್ಷಗಳ ಟೀಕೆ

ದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಗಳವಾರ ಕೇಂದ್ರ ಬಜೆಟ್ ೨೦೨೪-೨೫ ಅನ್ನು ಮಂಡಿಸಿದ್ದು, ಇದು ಕಾಂಗ್ರೆಸ್ ಪ್ರಣಾಳಿಕೆ ಎಂದು ಕಾಂಗ್ರೆಸ್ ಪಕ್ಷದ ನಾಯಕರು ಟೀಕಿಸಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಕೂಡ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಕೇಂದ್ರ ಸರ್ಕಾರ ಕೊನೆಗೂ ಸಾಮೂಹಿಕ ನಿರುದ್ಯೋಗ ರಾಷ್ಟ್ರೀಯ ಬಿಕ್ಕಟ್ಟು ಎಂದು ಒಪ್ಪಿಕೊಳ್ಳುವುದು ತುರ್ತು ಗಮನದ ಅಗತ್ಯವಿದೆ ಇದು ತುಂಬಾ ತಡವಾಗಿದೆ ಎಂದಿದ್ದಾರೆ.

ಈ ಬಜೆಟ್ ಹೆಚ್ಚು ಕಡಿಮೆ ಕಾಂಗ್ರೆಸ್ ಪ್ರಣಾಳಿಕೆಯನ್ನು ನಕಲು ಮಾಡಿದೆ. ಪ್ರಮುಖ ವಿಷಯವೆಂದರೆ ಯುವ ನಿಧಿ ಯೋಜನೆ ಬಗ್ಗೆ ಈ ಸರ್ಕಾರವು ಅಪ್ರೆಸೆಂಟಿಶಿಪ್ ಯುವಕರಿಗೆ ೫೦೦೦ ಘೋಷಿಸಿದೆ.

ಈ ಸರ್ಕಾರವು ರಾಹುಲ್ ಗಾಂಧಿಯವರ ಆಲೋಚನೆಗಳನ್ನು ನಕಲು ಮಾಡಿದೆ ಎಂದು ತೋರಿಸುತ್ತದೆ. ಆಂಧ್ರಪ್ರದೇಶಕ್ಕೆ ಲಾಲಿಪಾಪ್ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ಹೇಳಿದ್ದಾರೆ. ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಭಾಷಣವನ್ನು ಕುರ್ಸಿ ಬಚಾವೋ ಬಜೆಟ್ ಎಂದು ಟೀಕಿಸಿದ್ದಾರೆ.

RELATED ARTICLES
- Advertisment -
Google search engine

Most Popular