ಬೆಂಗಳೂರು : ಇಂದಿನಿಂದ ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ನಡೆಯಲಿರುವ ಏರ್ ಶೋ ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದ್ದಾರೆ.
ಇಂದು ಏರ್ ಶೋಗೆ ಚಾಲನೆ ನೀಡಿದ ಬೆನ್ನಲ್ಲೇ ಭಾರತೀಯ ವಾಯುಪಡೆಯ ಎಲ್‌ಸಿಎ ತೇಜಸ್ ಮಾರ್ಕ್ 1ಎ ಆಕಾಶದಲ್ಲಿ ಕುಶಲತೆಯನ್ನು ಪ್ರದರ್ಶನಕ್ಕೆ ವೀಕ್ಷಕರು ಫಿದಾ ಆಗಿದ್ದಾರೆ.
ಏರೋ ಇಂಡಿಯಾದಲ್ಲಿ ಒಟ್ಟು 90 ದೇಶಗಳು, 30 ದೇಶಗಳ ರಕ್ಷಣಾ ಸಚಿವರು, 43 ರಾಷ್ಟ್ರಗಳ ಸೇನಾ ಮುಖ್ಯಸ್ಥರು ಪಾಲ್ಗೊಳ್ಳಲಿದ್ದಾರೆ. ಏರ್ ಶೋದಲ್ಲಿ 70 ಕ್ಕೂ ಹೆಚ್ಚು ಯುದ್ದ ವಿಮಾನ, ಸರಕು ,ತರಬೇತಿ ವಿಮಾನಗಳು ಪ್ರದರ್ಶನ ನೀಡಲಿವೆ. ಏರ್ ಶೋ ನೋಡಲು 5 ದಿನಗಳಲ್ಲಿ 7 ಲಕ್ಷ ಜರು ಆಗಮಿಸುವ ನಿರೀಕ್ಷೆ ಇದೆ. ಏರ್ ಶೋ 2025 ಫೆಬ್ರವರಿ 10ರಿಂದ ಫೆಬ್ರವರಿ 14ರ ವರೆಗೆ ಪ್ರತಿದಿನವೂ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ನಡೆಯಲಿದೆ. ಫೆಬ್ರವರಿ 13 ಹಾಗೂ 14ರಂದು ಸಾರ್ವಜನಿಕರಿಗೆ ಅವಕಾಶ ಇರಲಿದೆ.