Friday, April 18, 2025
Google search engine

Homeರಾಜಕೀಯಕೇಂದ್ರ ಸಚಿವ ಹೆಚ್‌ಡಿಕೆ ಹೋದ್ರೂ ಪ್ರವಾಸಿ ಮಂದಿರದ ಬೀಗ ತೆಗೆಯದ ಅಧಿಕಾರಿಗಳು

ಕೇಂದ್ರ ಸಚಿವ ಹೆಚ್‌ಡಿಕೆ ಹೋದ್ರೂ ಪ್ರವಾಸಿ ಮಂದಿರದ ಬೀಗ ತೆಗೆಯದ ಅಧಿಕಾರಿಗಳು

ಮೈಸೂರು: ನಂಜನಗೂಡು ಪ್ರವಾಸಿ ಮಂದಿರವನ್ನು ನಿರ್ವಹಣೆ ಮಾಡುವ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದಾರೆ. ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕಾ ಸಚಿವ ಹೆಚ್‌ಡಿ ಕುಮಾರಸ್ವಾಮಿ ಇಂದು ನಂಜನಗೂಡು ಪ್ರವಾಸ ಕೈಗೊಂಡಿದ್ದಾರೆ. ಇಂದು ಬೆಳಗ್ಗೆ ಪ್ರವಾಸಿ ಮಂದಿರಕ್ಕೆ ವಿಶ್ರಾಂತಿ ಪಡೆಯಲು ಆಗಮಿಸಿದ್ದಾರೆ. ಆದ್ರೆ, ಪ್ರವಾಸಿ ಮಂದಿರದ ಬಾಗಿಲಿಗೆ ಬೀಗ ಹಾಕಲಾಗಿತ್ತು.

ಪ್ರವಾಸಿ ಮಂದಿರದ ಹೊರ ಭಾಗ ಕಾರಿನಲ್ಲೇ ಕುಳಿತ ಎಚ್‌ಡಿಕೆ 10 ನಿಮಿಷ ಕಾದರೂ ಯಾವೊಬ್ಬ ಸಿಬ್ಬಂದಿ ಬಂದಿರಲಿಲ್ಲ. ಕೊನೆಗೆ ಕುಮಾರಸ್ವಾಮಿ ಕಾರಿನ ಮೂಲಕ ತೆರಳಿದ್ದಾರೆ.

ಎಚ್‌ಡಿಕೆ ಭೇಟಿ ವಿಚಾರವನ್ನು ಅಧಿಕಾರಿಗಳಿಗೆ ಮೊದಲೇ ತಿಳಿಸಲಾಗಿತ್ತು ಮತ್ತು ಪ್ರವಾಸ ಪಟ್ಟಿಯನ್ನು ಸಚಿವಾಲಯದ ಸಿಬ್ಬಂದಿ ಬಿಡುಗಡೆ ಮಾಡಿದ್ದರು. ಆದರೂ ಸಹ ನಂನಜಗೂಡು ಪ್ರವಾಸಿ ಮಂದಿರಕ್ಕೆ ಬೀಗ ಹಾಕಲಾಗಿದೆ. ಇನ್ನು ಪ್ರವಾಸಿ ಮಂದಿರದ ಬಾಗಿಲು ತೆರೆಯದ್ದಕ್ಕೆ ಕಾರಿನಲ್ಲಿದ್ದ ಮಾಜಿ ಸಚಿವ ಸಾ.ರಾ. ಮಹೇಶ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರ ಮತ್ತು ಕುಮಾರಸ್ವಾಮಿ ನಡುವಿನ ದ್ವೇಷ ರಾಜಕೀಯ ಮುಂದುವರಿದಂತಾಗಿದೆ.

RELATED ARTICLES
- Advertisment -
Google search engine

Most Popular