Monday, April 7, 2025
Google search engine

Homeಅಪರಾಧಅಪರಿಚಿತ ವ್ಯಕ್ತಿ, ಇತರರಿಂದ ಮಾನಹಾನಿಗೆ ಯತ್ನ: ದೂರು ದಾಖಲಿಸಿದ ಸೌಜನ್ಯ ತಾಯಿ ಕುಸುಮಾವತಿ

ಅಪರಿಚಿತ ವ್ಯಕ್ತಿ, ಇತರರಿಂದ ಮಾನಹಾನಿಗೆ ಯತ್ನ: ದೂರು ದಾಖಲಿಸಿದ ಸೌಜನ್ಯ ತಾಯಿ ಕುಸುಮಾವತಿ

ಮಂಗಳೂರು(ದಕ್ಷಿಣ ಕನ್ನಡ): ಅಪರಿಚಿತ ವ್ಯಕ್ತಿ ಹಾಗೂ ಇತರರು ತನ್ನ ಮೇಲೆ ಮಾನಹಾನಿಗೆ ಯತ್ನಿಸಿದ ಕುರಿತು ಹಾಗೂ ತನ್ನ ಮಗನಿಗೆ ಹಲ್ಲೆ ನಡೆಸಿದ ಬಗ್ಗೆ ಧರ್ಮಸ್ಥಳದ ಸಮೀಪ ಹತ್ಯೆಯಾದ ಸೌಜನ್ಯ ತಾಯಿ ಕುಸುಮಾವತಿ ಅವರು ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ತನ್ನ ಮಗಳು ಸೌಜನ್ಯಾ 11 ವರ್ಷಗಳ ಹಿಂದೆ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾಗಿದ್ದಳು. ಈ ಕೃತ್ಯದ ನೈಜ ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೊಳಪಡಿಸುವಂತೆ ನಾನು 11 ವರ್ಷದಿಂದ ಹೋರಾಟ ನಡೆಸುತ್ತಿದ್ದು, ಅದೇ ಉದ್ದೇಶದಿಂದ ಆ. 4ರಂದು ಉಜಿರೆಯಲ್ಲಿ ಸಭೆಯೊಂದನ್ನು ಆಯೋಜಿಸಿರುವುದನ್ನು ತಿಳಿದು ನ್ಯಾಯಕ್ಕಾಗಿ ಕುಟುಂಬದೊಂದಿಗೆ ತೆರಳಿದ್ದೆ. ಈ ಸಂದರ್ಭ ಅಪರಿಚಿತ ವ್ಯಕ್ತಿಗಳು, ಇತರರೊಂದಿಗೆ ಸೇರಿಕೊಂಡು ತನ್ನನ್ನು ತಡೆದು ಮಾನಹಾನಿಗೆ ಯತ್ನಿಸಿದ್ದಲ್ಲದೆ, ತನ್ನ ಮಗ ಜಯರಾಮನಿಗೂ ಹಲ್ಲೆ ನಡೆಸಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular