ತುಮಕೂರು: ಸಂಬಳ ನೀಡದೆ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಚಿಕ್ಕನಾಯಕನಹಳ್ಳಿ ವಲಯ ಅರಣ್ಯ ಇಲಾಖೆ ಕಚೇರಿ ಎದುರು ಮಲಗಿ ಮೇಲಾಧಿಕಾರಿ ವಿರುದ್ಧ ಡಿ ಗ್ರೂಪ್ ನೌಕರ ರವಿಕುಮಾರ್ ಕಚೇರಿ ಎದುರು ನಡೆಸುತ್ತಿದ್ದಾರೆ. ಮೇಲಾಧಿಕಾರಿಗಳು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲವೆಂದು ಆರೋಪ ಮಾಡುತ್ತಿರುವ ರವಿಕುಮಾರ್, ವಲಯ ಅರಣ್ಯ ಕಚೇರಿಯಲ್ಲಿ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದು , ನವೆಂಬರ್ ತಿಂಗಳ ಸಂಬಳ ಕೊಡದೆ ಸತಾಯಿಸುತ್ತಿದ್ದಾರೆ ಎಂದು ರವಿಕುಮಾರ್ ಮೇಲಾಧಿಕಾರಿ ವಿರುದ್ಧ ಆರೋಪ ಮಾಡಿದ್ದಾರೆ.