Saturday, April 19, 2025
Google search engine

Homeರಾಜ್ಯಸುದ್ದಿಜಾಲಅಸಂಘಟಿತ ಕಾರ್ಮಿಕರು ಪಡಿತರ ಚೀಟಿ ಪಡೆಯಲು ಮನವಿ

ಅಸಂಘಟಿತ ಕಾರ್ಮಿಕರು ಪಡಿತರ ಚೀಟಿ ಪಡೆಯಲು ಮನವಿ

ಚಾಮರಾಜನಗರ: ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯವು ಅಭಿವೃದ್ಧಿಪಡಿಸಿದ ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಣಿಯಾಗಿ ಕುಟುಂಬದ ಪಡಿತರ ಚೀಟಿಯನ್ನು ಪಡೆದಿಲ್ಲದಿರುವ ಅಸಂಘಟಿತ ಕಾರ್ಮಿಕರು ಕೂಡಲೇ ಆಯಾ ತಾಲೂಕಿನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿ, ನಿರೀಕ್ಷಕರ ಕಚೇರಿ ಸಂಪರ್ಕಿಸಿ ಪಡಿತರ ಚೀಟಿ ಪಡೆದುಕೊಳ್ಳುವಂತೆ ಕಾರ್ಮಿಕ ಇಲಾಖೆ ತಿಳಿಸಿದೆ.

ಆಧಾ ಕಾರ್ಡ್, ಇ-ಶ್ರಮ್ ಕಾರ್ಡ್, ಕುಟುಂಬದ ಮುಖ್ಯಸ್ಥರ ಆದಾಯ ಪ್ರಮಾಣ ಪತ್ರ ಹಾಗೂ ಪಡಿತರಚೀಟಿ ಹೊಂದಿದ್ದರೆ ಪಡಿತರ ಚೀಟಿ ಸಂಖ್ಯೆ, ಪ್ರತಿಯನ್ನು ಸಂಬಂಧಿಸಿದ ಇತರೆ ದಾಖಲಾತಿಗಳೊಂದಿಗೆ ಆಯಾಯ ತಾಲೂಕಿನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿ, ನಿರೀಕ್ಷಕರ ಕಚೇರಿ ಸಂಪರ್ಕಿಸಿ ಪಡಿತರಚೀಟಿ ಪಡೆದುಕೊಳ್ಳಬಹುದು.

ಚಾಮರಾಜನಗರ ತಾಲೂಕು ಆಹಾರ ನಿರೀಕ್ಷಕರಾದ ದಿನಕರ್ ಮೊ.ಸಂ ೮೦೭೩೭೦೧೮೬೭, ಚಿಕ್ಕಣ್ಣ ಮೊ.ಸಂ ೯೭೪೩೧೨೨೩೦೧, ಗುಂಡ್ಲುಪೇಟೆ ತಾಲೂಕು ಆಹಾರ ನಿರೀಕ್ಷಕರಾದ ಪೂರ್ಣಿಮಾ ಮೊ.ಸಂ ೭೮೯೨೩೮೯೨೨೦, ಯಳಂದೂರು ತಾಲೂಕು ಆಹಾರ ನಿರೀಕ್ಷಕರಾದ ಬಿಸಲಯ್ಯ ಮೊ.ಸಂ ೯೯೦೨೦೩೯೯೨೯, ಕೊಳ್ಳೇಗಾಲ ತಾಲೂಕು ಆಹಾರ ನಿರೀಕ್ಷಕರಾದ ಪ್ರಸಾದ್ ಮೊ.ಸಂ ೭೭೬೦೧೨೧೫೨೧, ಹನೂರು ತಾಲೂಕು ಆಹಾರ ನಿರೀಕ್ಷಕರಾದ ಬಸವರಾಜು ಮೊ.ಸಂ ೭೮೯೨೯೬೮೭೭೪ ಸಂಪರ್ಕಿಸುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ. ಸವಿತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular