ಮಂಡ್ಯ: ಹಂದಿಗೆ ಟಿಪ್ಪು ಪೇಟ ತೊಡಿಸಿ ಅಹಿತಕರ ಪೋಸ್ಟ್ ಹಾಕಿದ್ದ ಭಜರಂಗದಳದ ಕಾರ್ಯಕರ್ತನನ್ನು ಮದ್ದೂರು ಪೊಲೀಸರು ಬಂಧಿಸಿದ್ದಾರೆ.
ಮದ್ದೂರಿನ ಚನ್ನೇಗೌಡ ಬಡಾವಣೆಯ ನಿವಾಸಿ ಸ್ವಾಮಿ ಬಂಧಿತ ವ್ಯಕ್ತಿ.
ಸ್ವಾಮಿ ಸಾಮಾಜಿಕ ಜಾಲತಾಣದ ವಾಟ್ಸಪ್’ನ ಸ್ಟೇಟಸ್’ಗೆ ವಿವಾದಾತ್ಮಕ ಫೋಟೋ ಹಾಕಿದ್ದ. ಕೋಮುಸೌಹಾರ್ಧ ಮತ್ತು ಶಾಂತಿ ಕದಡಿದ ಆರೋಪದಡಿ ಮುಸ್ಲಿಂರ ಮುಖಂಡರು ಸ್ವಾಮಿ ವಿರುದ್ಧ ದೂರು ದಾಖಲಿಸಿದ್ದರು.
ದೂರಿನ ಮೇರೆಗೆ ಹಿಂದೂ ಕಾರ್ಯಕರ್ತನನ್ನು ಬಂಧಿಸಿದ್ದು, ಪೊಲೀಸರ ನಡೆ ಖಂಡಿಸಿ ಹಿಂದೂಪರ ಸಂಘಟನೆಗಳು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ.
ಸ್ವಾಮಿ ಬಂಧನವನ್ನು ಖಂಡಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ಠಾಣೆ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.