ಮೈಸೂರು:ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥರು ಇಂದು ನಗರದ ವಿಜಯ ವಿಠಲ ವಿದ್ಯಾಶಾಲೆಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೂತನ ಸಹಪಠ್ಯ ಚಟುವಟಿಕೆ ಗಳ ಕೊಠಡಿಗಳನ್ನು ಅನಾವರಣ ಗೊಳಿಸಿದರು. ಸಂಸ್ಥೆಯೂ ವಿದ್ಯಾರ್ಥಿಗಳ ಸರ್ವತಮುಖ ಅಭಿವೃದ್ಧಿಗೆ ಪೂರಕವಾದ, ಹಾಗೂ ಬಹುಮುಖ ಪ್ರತಿಭೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಲು ಉತ್ಕೃಷ್ಟ ಶಿಕ್ಷಣ ಸೌಲಭ್ಯವನ್ನು ನೀಡಬೇಕೆಂಬ ಆಕಾಂಕ್ಷೆಯೊಂದಿಗೆ, ಬದಲಾಗುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿ 2020ಕ್ಕೆ ಅನುಗುಣವಾಗಿ ಹೊಸ ಹೊಸ ಸಹಪಠ್ಯ ಚಟುವಟಿಕೆ ಆಧಾರಿತ ಶಿಕ್ಷಣ ವನ್ನು ಹೇಳಿಕೊಡಲು ನಿರ್ದಾರಿಸಲಾಗಿದೆ.
ಈ ಅಂಶಗಳಿಗೆ ಪೂರಕವಾಗಿ ಮಕ್ಕಳ ಬೌದ್ಧಿಕ ಹಾಗೂ ಮಾನಸಿಕ ವಿಕಸನದ ಆಟವೆಂದೇ ಹೆಸರಾದ ಚದುರಂಗ
ಆಟಕ್ಕೆ ವಿಶೇಷವಾದ, ವಿಶಾಲವಾದ,ಉತ್ಕೃಷ್ಟ ಮಟ್ಟದ ವ್ಯವಸ್ಥೆಯೊಂದಿಗೆ ಹೊಸದಾದ, ಪ್ರತ್ಯೇಕ ಕೊಠಡಿಯನ್ನೇ ನಿರ್ಮಾಣ ಮಾಡಿದ್ದಾರೆ. ಅದರ ಬದಿಯಲ್ಲಿಯೇ ಪ್ರಾರ್ಥನೆ ಮತ್ತು ಧ್ಯಾನಕ್ಕಾಗಿ ಒಂದು ಸಭಾಂಗಣವನ್ನು ನಿರ್ಮಿಸಲಾಗಿದೆ. ಒತ್ತಡ ತುಂಬಿದ ಇಂದಿನ ಆಧುನಿಕ ಬದುಕಿಗೆ ಈ ಕೊಠಡಿ ಶಾಂತಿಯ ಪ್ರತೀಕವಾಗಿದೆ. ಹಾಗೂ ಗಣಿತ ಪ್ರಯೋಗಾಲಯದ ನಿರ್ಮಾಣವನ್ನು ಮಾಡಲಾಗಿದೆ. ಚಟುವಟಿಕೆ ಆಧಾರಿತ ಗಣಿತ ಬೋಧನೆಗೆ ಇಲ್ಲಿ ಆದ್ಯತೆ ನೀಡಲಾಗಿದೆ.
ನವೀನ ಮಾದರಿಗಳೊಂದಿಗೆ, ಕ್ಲಿಷ್ಟಕರ ಎನಿಸಿದ ಗಣಿತವನ್ನು,ಮಕ್ಕಳಿಗೆ ಇಷ್ಟಕರವನ್ನಾಗಿ ಮಾಡುವುದೇ ಈ ಪ್ರಯೋಗಾಲಯದ ಉದ್ದೇಶವಾಗಿದೆ. ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗಾಗಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ, ನವೀನ ಮಾದರಿಯನ್ನು ಒಳಗೊಂಡ, ವಿಜ್ಞಾನ ಪ್ರಯೋಗಾಲಯವನ್ನು ಇಲ್ಲಿ ನಿರ್ಮಿಸಲಾಗಿದೆ. . ಈ ಶತಮಾನದ ಹೊಸ ಆವಿಷ್ಕಾರವೆಂದರೆ ಕೃತಕ ಬುದ್ಧಿ ಮತ್ತೆ ಮತ್ತು ರೋಬೋಟಿಕ್ ಪ್ರಯೋಗಾಲ. ಈ ವಿಷಯಗಳ ಕಲಿಕೆಗಾಗಿಯೇ ಹೆಚ್ಚು ಹೊತ್ತು ನೀಡುವ ಉದ್ದೇಶದಿಂದವ್ಯವಸ್ಥಿತವಾದ ಕೊಠಡಿಯನ್ನು ಸಂಸ್ಥೆಯವರು ನಿರ್ಮಾಣ ಮಾಡಿದ್ದಾರೆ.
ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ವಿಜಯ ವಿಠಲ ವಿದ್ಯಾಶಾಲೆಯ ಅಧ್ಯಕ್ಷರು ಆದ ಶ್ರೀಯುತ ಆರ್.ಗುರು ರವರು, ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಶ್ರೀಯುತ ಆರ್.ವಾಸುದೇವ್ ಭಟ್ ರವರು, ಶ್ರೀಯುತ ಬಿ. ಎಸ್ ರವಿಕುಮಾರ್, ಖಜಾಂಚಿ , ಟ್ರಸ್ಟ್.ಗಳಾದ ಶ್ರೀಯುತ ಶ್ರೀಕಾಂತ್ ದಾಸ್ ರವರು, ಶ್ರೀಯುತ.ಸಿ.ಎ.ವಿಶ್ವನಾಥ್ ರವರು, ಭಗಿನಿ ಸೇವಾ ಸಮಾಜ ಸಂಸ್ಥೆಯ ಅಧ್ಯಕ್ಷರು ಶ್ರೀಯುತ ಬಿ.ಶ್ರೀನಿವಾಸ್ ,ಶ್ರೀಯುತ ಎಚ್.ಟಿ ಸ್ವರ್ಣ ಕುಮಾರ್ ಖಜಾಂಚಿ, ಟ್ರಸ್ಟ್.ಗಳಾದ ಶ್ರೀಮತಿ ಪದ್ಮಜಾ ಶ್ರೀನಿವಾಸ್, ಶ್ರೀಮತಿ ವಂದನಾ ಗೋವಿಂದಕೃಷ್ಣ ಹಾಗೂ ಶ್ರೀಯುತ ಗುರುರಾಜ್ ಕೆ.ಎಸ್, ಹಾಗೂ ಹಲವಾರು ಗಣ್ಯರು, ಆಡಳಿತ ಮಂಡಳಿಯವರು, ಭಾಗಿಯಾಗಿದ್ದರು., ವಿಜಯ ವಿಠಲ ವಿದ್ಯಾಶಾಲೆಯ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ.ಸತ್ಯ ಪ್ರಸಾದ್ ರವರು,ವಿಜಯ ವಿಠಲ ವಿದ್ಯಾಶಾಲೆ ಪ್ರಾಂಶುಪಾಲರಾದ ಶ್ರೀಮತಿ.ವೀಣಾ.ಎಸ್.ಎ. ರವರು ಹಾಗೂ, ಶಾಲೆಯ ವಿವಿಧ ವರ್ಗದ ಮುಖ್ಯಸ್ಥರು, ಶಿಕ್ಷಕ ವರ್ಗ,ಮಕ್ಕಳು ಹಾಗೂ ಉಪಸ್ಥಿತರಿದ್ದರು.