Friday, August 29, 2025
Google search engine

Homeಅಪರಾಧಕಾನೂನುರಾಯಚೂರಲ್ಲಿ ಅಂಬೇಡ್ಕರ್ ಹಾಸ್ಟೆಲ್ ಮೇಲೆ ಉಪಲೋಕಾಯುಕ್ತ ದಾಳಿ

ರಾಯಚೂರಲ್ಲಿ ಅಂಬೇಡ್ಕರ್ ಹಾಸ್ಟೆಲ್ ಮೇಲೆ ಉಪಲೋಕಾಯುಕ್ತ ದಾಳಿ

ರಾಯಚೂರು : ನಿನ್ನೆ ರಾತ್ರಿ ರಾಯಚೂರಿನ ಅಂಬೇಡ್ಕರ್ ವಸತಿ ನಿಲಯಕ್ಕೆ ಉಪಲೋಕಾಯುಕ್ತ ನ್ಯಾ.ಬಿ. ವೀರಪ್ಪ ಏಕಾಏಕಿ ದಾಳಿ ಮಾಡಿ ಅಲ್ಲಿನ ಅವ್ಯವಸ್ಥೆಯನ್ನು ಕಂಡು ವಾರ್ಡನ್ ಸಸ್ಪೆಂಡ್ ಮಾಡಿ ಸೂಚನೆ ನೀಡಿದರು. ಅದಾದ ಬಳಿಕ ಇಂದು ಆರ್ ಟಿ ಓ ಕಚೇರಿ ಮೇಲೆ ನ್ಯಾ.ಬಿ.ವೀರಪ್ಪ ದಾಳಿ ಮಾಡಿದ್ದಾರೆ.

ರಾಯಚೂರು ನಗರದ ಆರ್ ಟಿ ಓ ಕಚೇರಿಯ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದರು. ಆರ್‌ಟಿಓ ಅಧಿಕಾರಿಗಳಿಗೆ ಉಪಲೋಕಾಯುಕ್ತ ವೀರಪ್ಪ ತರಾಟೆ ತೆಗೆದುಕೊಂಡರು. ವಾಹನಗಳ ಮಾಹಿತಿ ನೀಡಲು ಆರ್‌ಟಿಓ ಅಧಿಕಾರಿಗಳು ತಡಬಾಡಾಯಿಸಿದರು. 29 ಸಾವಿರ ವಾಹನಗಳ ಪೈಕಿ 236 ಶಾಲಾ ವಾಹನಗಳ ಹೀಗೆ ಎಫ್ ಸಿ ಇಲ್ಲ ಎಫ್ ಸಿ ಇಲ್ಲದ ಶಾಲಾ ವಾಹನಗಳನ್ನು ಮಾಡದಿದ್ದಕ್ಕೆ ನ್ಯಾ.ಬಿ.ವೀರಪ್ಪ ಆಕ್ರೋಶ ಹೊರಹಾಕಿದರು.

ಎಫ್ ಸಿ ಇಲ್ಲದ ವಾಹನಗಳಿಗೆ ಹೆಚ್ಚು ಕಡಿಮೆ ಆದರೆ ಪರಿಹಾರ ಸಿಗುವುದಿಲ್ಲ ನಿಮ್ಮ ಮಕ್ಕಳಿಗೆ ಇದೇ ರೀತಿ ಆದರೆ ಏನು ಮಾಡುತ್ತೀರಿ? ಬೇರೆ ಮಕ್ಕಳ ಬಗ್ಗೆ ಕಾಳಜಿ ಇಲ್ವಾ ಅಂತ ಅಧಿಕಾರಿಗಳಿಗೆ ನ್ಯಾ.ಬಿ.ವೀರಪ್ಪ ತರಾಟೆಗೆ ತೆಗೆದುಕೊಂಡರು.ಎಲ್ಲಾ ಆರ್ ಟಿ ಓ ಇನ್ಸ್ಪೆಕ್ಟರ್ಗಳ ಫೋನ್ ಪೇ ಗಳನ್ನು ಇದೇ ವೇಳೆ ಪರಿಶೀಲನೆ ಮಾಡಿದ ಅವರು ಚಾರ್ಟ್ ಕ್ಲಿಯರ್ ಆಗಿದ್ದರ ಬಗ್ಗೆ ಅಧಿಕಾರಿಗಳಿಗೆ ಪ್ರಶ್ನಿಸಿದ್ದಾರೆ.

RELATED ARTICLES
- Advertisment -
Google search engine

Most Popular