Friday, April 4, 2025
Google search engine

Homeಸಿನಿಮಾಭಕ್ತಿ ಪ್ರಧಾನ ಚಿತ್ರದಲ್ಲಿ ಉಪೇಂದ್ರ

ಭಕ್ತಿ ಪ್ರಧಾನ ಚಿತ್ರದಲ್ಲಿ ಉಪೇಂದ್ರ

ಉಪೇಂದ್ರ ಸದ್ಯ ಅವರದ್ದೇ ನಿರ್ದೇಶನದ “ಯು-ಐ’ ಚಿತ್ರದಲ್ಲಿ ಬಿಝಿಯಾಗಿದ್ದಾರೆ. ಈ ನಡುವೆಯೇ ಉಪೇಂದ್ರ ಅವರ ಹೊಸ ಸಿನಿಮಾದ ಅಪ್‌ಡೇಟ್‌ ಹೊರಬಿದ್ದಿದೆ. ಅದು ಭಕ್ತಿಪ್ರಧಾನ ಸಿನಿಮಾ ಕುರಿತಾಗಿ. ಹೌದು, ಉಪೇಂದ್ರ ಅವರು ಭಕ್ತಿಪ್ರಧಾನ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ.

ಹಿರಿಯ ನಿರ್ದೇಶಕ ನಾಗಣ್ಣ ನಿರ್ದೇಶಿಸುತ್ತಿರುವ ಹೊಸ ಚಿತ್ರ ಕನಕದಾಸರ ಜೀವನವನ್ನಾಧರಿಸಿದ ಚಿತ್ರವಾಗಿದ್ದು, ಈ ಚಿತ್ರವನ್ನು ಈ ಹಿಂದೆ ಉಪೇಂದ್ರ ಅವರ “ಎ’ ಸಿನಿಮಾ ನಿರ್ದೇಶಿಸಿದ ನಿರ್ಮಾಪಕರೇ ನಿರ್ಮಿಸಲಿದ್ದಾರೆ.

ಇನ್ನು, ಉಪೇಂದ್ರ ಅವರ ಹೊಸ ಚಿತ್ರಕ್ಕೆ ಜಿ.ಕೆ.ಭಾರವಿ ಅವರ ಕಥೆ, ಹಂಸಲೇಖಾ ಅವರ ಸಾಹಿತ್ಯ, ಸಂಗೀತ, ಸುರೇಶ್‌ ಅರಸ್‌ ಅವರ ಸಂಕಲನವಿದೆ.

RELATED ARTICLES
- Advertisment -
Google search engine

Most Popular