Monday, April 7, 2025
Google search engine

Homeರಾಜ್ಯಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಗದ್ದಲ: ವಕ್ಫ್ ಪ್ರತಿ ಹರಿದು ಪ್ರತಿಭಟಿಸಿದ ಎನ್‌ಸಿ ಶಾಸಕರು

ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಗದ್ದಲ: ವಕ್ಫ್ ಪ್ರತಿ ಹರಿದು ಪ್ರತಿಭಟಿಸಿದ ಎನ್‌ಸಿ ಶಾಸಕರು

ಶ್ರೀನಗರ : ನೂತನ ವಕ್ಫ್‌ ಕಾಯ್ದೆ ಬಗ್ಗೆ ಚರ್ಚೆಗೆ ಅವಕಾಶ ನೀಡದ ಹಿನ್ನಲೆ ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಆಡಳಿತರೂಢ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷದ ಶಾಸಕರು ಮೋದಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಸದನ ಆರಂಭವಾಗುತ್ತಿದ್ದಂತೆ ಆಡಳಿತ ಪಕ್ಷದ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಶಾಸಕರು ಚರ್ಚೆಗೆ ಅವಕಾಶ ಕೋರಿ ನಿಲುವಳಿ ಸೂಚನೆ ಮಂಡಿಸಿದರು. ಆದರೆ ಚರ್ಚೆಗೆ ಅನುಮತಿ ನೀಡದ ಸ್ಪೀಕರ್ ಅಬ್ದುಲ್ ರಹೀಮ್ ರಾಥರ್ ನಿಯಮ 56 ಮತ್ತು 58 (7) ಅನ್ನು ಉಲ್ಲೇಖಿಸಿ ನಿಲುವಳಿ ಸೂಚನೆಯನ್ನು ವಜಾಗೊಳಿಸಿದರು. ಈ ವಿಷಯವು ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ ಮತ್ತು ಅದರ ಪ್ರತಿಯನ್ನು ನಾನು ಹೊಂದಿರುವುದರಿಂದ, ನಾವು ಆ ಬಗ್ಗೆ ಚರ್ಚಿಸಲು ಸಾಧ್ಯವಿಲ್ಲ ಎಂದು ನಿಯಮವು ಸ್ಪಷ್ಟವಾಗಿ ಹೇಳುತ್ತದೆ ಎಂದು ಹೇಳಿದರು.

ಇದರಿಂದ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಯಿತು.. ಎನ್‌ಸಿ ಶಾಸಕರಾದ ಹಿಲಾಲ್ ಲೋನ್ ಮತ್ತು ಸಲ್ಮಾನ್ ಸಾಗರ್ ವಕ್ಫ್ ಕಾಯ್ದೆಯ ಪ್ರತಿಗಳನ್ನು ಹರಿದು ಹಾಕಿದರು. ಎನ್‌ಸಿ ಶಾಸಕ ಅಬ್ದುಲ್ ಮಜೀದ್ ಲಾರ್ಮಿ ಪ್ರತಿಭಟನೆಯಲ್ಲಿ ಸದನದಲ್ಲಿ ತಮ್ಮ ಜಾಕೆಟ್ ಹರಿದು ಸಿಟ್ಟು ಪ್ರದರ್ಶಿಸಿದರು.

ಕೃಷಿ ಕಾನೂನುಗಳನ್ನು ಹಿಂದಕ್ಕೆ ಪಡೆದಂತೆ ಮೋದಿ ಸರ್ಕಾರ ವಕ್ಫ್ ಕಾನೂನನ್ನು ಹಿಂಪಡೆಯಬೇಕು. ಈ ಕಾನೂನನ್ನು ಹಿಂತೆಗೆದುಕೊಳ್ಳುವವರೆಗೆ ನಾವು ವಿಧಾನಸಭೆಯ ಕಲಾಪಗಳನ್ನು ನಡೆಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

RELATED ARTICLES
- Advertisment -
Google search engine

Most Popular