ತುಮಕೂರು: ಹಣಕಾಸಿನ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಯುವಕನೋರ್ವನ ಮೇಲೆ ತೀವ್ರ ಹಲ್ಲೆ ಮಾಡಲಾಗಿದ್ದು, ಹಲ್ಲೆಗೊಳಗಾದ ಯುವಕ ಸಾವನ್ನಪ್ಪಿರುವ ಘಟನೆ, ತುರುವೇಕೆರೆ ತಾಲೂಕಿನ ಕರೇಕಲ್ಲು ಗ್ರಾಮದಲ್ಲಿ ನಡೆದಿದೆ.
ದಿಲೀಪ್(22) ಮೃತ ಯುವಕ.
ಪ್ರಸಾದ್ ಹಾಗೂ ಕಿರಣ್ ಕುಮಾರ್ ನಡುವೆ ಹಣದ ವ್ಯವಹಾರ ವಾಗಿ ಗಲಾಟೆ ನಡೆದಿತ್ತು. ಇವರಿಬ್ಬರ ರಾಜೀ ಮಾಡಿಸಲು ಕಿರಣ್ ಕುಮಾರ್ ಸ್ನೇಹಿತ ದಿಲೀಪ್ ಬಂದಿದ್ದ ಈ ನಡುವೆ ಪ್ರಸಾದ್, ಮಂಜುನಾಥ್ ಎನ್ನುವವರಿಂದ ದಿಲೀಪ್ ಮೇಲೆ ಮಾರಕಸ್ತ್ರಗಳಿಂದ ದಾಳಿ ಮಾಡಲಾಗಿತ್ತು,
ತೀವ್ರವಾಗಿ ಗಾಯಗೊಂಡ ಯುವಕನನ್ನು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಾವನ್ನಪ್ಪಿದ್ದಾನೆ.
ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.