Friday, April 11, 2025
Google search engine

Homeಅಪರಾಧಚರಂಡಿ ನೀರು ಹರಿದುಹೋಗುವ ವಿಚಾರಕ್ಕೆ ಗಲಾಟೆ: ಗಾಯಗೊಂಡಿದ್ದ ಯುವಕ ಸಾವು

ಚರಂಡಿ ನೀರು ಹರಿದುಹೋಗುವ ವಿಚಾರಕ್ಕೆ ಗಲಾಟೆ: ಗಾಯಗೊಂಡಿದ್ದ ಯುವಕ ಸಾವು

ತುಮಕೂರು: ಚರಂಡಿ ನೀರು ಹರಿದುಹೋಗುವ ವಿಚಾರಕ್ಕೆ ಎರಡು ಕುಟುಂಬದ ನಡುವೆ ನಡೆದ ಗಲಾಟೆಯಲ್ಲಿ ಗಾಯಗೊಂಡಿದ್ದ ಯುವಕ ಸಾವನ್ನಪ್ಪಿದ್ದಾನೆ.

ವಸಂತ್​​ಕುಮಾರ್‌(24)  ಮೃತ ಯುವಕ.

ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಕನ್ನುಘಟ್ಟ ಗ್ರಾಮದಲ್ಲಿ ಚರಂಡಿ ನೀರು ಹರಿದುಹೋಗುವ ವಿಚಾರಕ್ಕೆ ಶಿವಬಸವಯ್ಯ ಮತ್ತು ಬಸವಲಿಂಗಯ್ಯ ಕುಟುಂಬದ ನಡುವೆ ಮಾರಾಮಾರಿ ನಡೆದಿದೆ.

ಈ ವೇಳೆ ಬಸವಲಿಂಗಯ್ಯ ಕುಟುಂಬದವರು ಶಿವಬಸವಯ್ಯ ಕುಟುಂಬದ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು, ಗಲಾಟೆ ವೇಳೆ ಗಾಯಗೊಂಡಿದ್ದ ಶಿವಬಸವಯ್ಯ ಪುತ್ರ ವಸಂತ್​​​ ಮೃತಪಟ್ಟಿದ್ದಾರೆ.

ಘಟನೆ ಸಂಬಂಧ ಬಸವಲಿಂಗಯ್ಯ, ಕುಮಾರ್, ವಿಜಯ್‌ ಸೇರಿ 8 ಜನರ ವಿರುದ್ಧ ನೊಣವಿನಕೆರೆ ಪೊಲೀಸ್​​ ಠಾಣೆಯಲ್ಲಿ ಎಫ್​​ಐಆರ್​ ದಾಖಲಾಗಿದೆ.

RELATED ARTICLES
- Advertisment -
Google search engine

Most Popular