Saturday, April 19, 2025
Google search engine

Homeರಾಜ್ಯಯುಪಿಎಸ್‌ಸಿ ಅಧ್ಯಕ್ಷ ಮನೋಜ್ ಸೋನಿ ರಾಜೀನಾಮೆ

ಯುಪಿಎಸ್‌ಸಿ ಅಧ್ಯಕ್ಷ ಮನೋಜ್ ಸೋನಿ ರಾಜೀನಾಮೆ

ನವದೆಹಲಿ: ಪೂಜಾ ಖೇಡ್ಕರ್ ವಿವಾದದ ನಡುವೆ ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ)ದ ಅಧ್ಯಕ್ಷ ಮನೋಜ್ ಸೋನಿ ರಾಜೀನಾಮೆ ನೀಡಿದ್ದಾರೆ.

ಅವರ ಅಧಿಕಾರಾವಧಿ ೨೦೨೯ಕ್ಕೆ ಕೊನೆಗೊಳ್ಳಬೇಕಿತ್ತು, ಐದು ವರ್ಷಗಳಿರುವಾಗಲೇ ಅವರು ರಾಜೀನಾಮೆ ನೀಡಿದ್ದು ಅನೇಕ ಊಹಾಪೋಹಗಳಿಗೆ ಕಾರಣವಾಗಿದೆ. ಮಾಹಿತಿ ಪ್ರಕಾರ ಮನೋಜ್ ಸೋನಿ ರಾಷ್ಟ್ರಪತಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಸೋನಿ ೨೦೧೭ರಲ್ಲಿ ಆಯೋಗದ ಸದಸ್ಯರಾಗಿ ಸೇರಿದ್ದರು. ಮೇ ೧೬, ೨೦೨೩ರಂದು ಅವರನ್ನು ಯುಪಿಎಸ್ಸಿ ಅಧ್ಯಕ್ಷರನ್ನಾಗಿ ಮಾಡಲಾಯಿತು. ನೂತನ ಅಧ್ಯಕ್ಷರ ಹೆಸರನ್ನು ಸರ್ಕಾರ ಪ್ರಕಟಿಸಿಲ್ಲ.

RELATED ARTICLES
- Advertisment -
Google search engine

Most Popular